ಈಡಿಗ ಸಮಾಜದ ಬಂದುಗಳು ಸಂಘಟಿತರಾಗಬೇಕು

ಕೆ.ಆರ್.ಪೇಟೆ:ಏ:03: ಸಮಾಜದಲ್ಲಿ ಅಸಂಘಟಿತ ರಾಗಿರುವ ಆರ್ಯ ಈಡಿಗ ಸಮಾಜದ ಬಂದುಗಳು ಸಂಘಟಿತರಾಗಿ ತಮಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯಬೇಕು ಎಂದು ರಾಜ್ಯದ ಯುವ ಸಬಲೀಕರಣ, ಕ್ರೀಡೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.
ಅವರು ಇಂದು ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಶ್ರೀ ರೇಣುಕಾಂಬ ಎಲ್ಲಮ್ಮ ದೇವಿ ದೇವಾಲಯದ 14 ನೇ ವರ್ಷದ ಪೂಜಾ ಮಹೋತ್ಸವ ಹಾಗೂ ಸಮಾಜದ ಬಂಧುಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಅಭಿನಂದಿಸಿ ಗೌರವಿಸಿ ಮಾತನಾಡಿದರು.
ತಮ್ಮ ಶ್ರಮದ ದುಡಿಕೆಯ ಮೂಲಕ ನ್ಯಾಯವಾಗಿ ಗೌರವಯುತವಾದ ಜೀವನ ನಡೆಸುತ್ತಿರುವ ಆರ್ಯ ಈಡಿಗ ಸಮುದಾಯದ ಬಂಧುಗಳು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವ ಜೊತೆಗೆ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಕಷ್ಟಪಟ್ಟು ಕಲಿತ ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಯಾರೂ ಯಾರಿಂದಲೂ ಕದಿಯಲಾಗದ ಆಸ್ತಿಯೆಂಬ ಸತ್ಯವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದ ಸಚಿವರು ಕನ್ನಡದ ವರನಟ ಡಾ. ರಾಜಕುಮಾರ್ ಮತ್ತು ತುಳಿತಕ್ಕೊಳಗಾದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಂತಹ ನಾಯಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಆರ್ಯ ಈಡಿಗ ಸಮಾಜವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಮುಂಬೈ ಮಹಾನಗರದಲ್ಲಿ ನನ್ನ ದುಡಿಮೆಗೆ ಸಹಕಾರ ನೀಡಿ, ನನ್ನ ಬೆಳವಣಿಗೆಗೆ ಸಹಾಯ ಮಾಡಿದ ಆರ್ಯ ಈಡಿಗ ಸಮಾಜದ ಜೊತೆಯಲ್ಲಿ ನಾನು ಯಾವಾಗಲೂ ಇರುತ್ತೇನೆ, ನನ್ನನ್ನೂ ನಿಮ್ಮ ಸಮುದಾಯದವನು ಎಂದು ಭಾವಿಸಿ ಸಮಾ ಜದ ಅಭಿವೃದ್ಧಿಗೆ ನಾನು ನಿಮ್ಮೊಂದಿಗಿರುತ್ತೇನೆ. ಸಮಾಜದ ಬಂಧುಗಳು ಅನುಕೂಲಕ್ಕಾಗಿ ಕೆ.ಆರ್.ಪೇಟೆ ಪಟ್ಟಣದ ಟಿಬಿ ಬಡಾವಣೆಯಲ್ಲಿ ಪುರಸಭೆಯ ವತಿಯಿಂದ 100×100 ಅಳತೆಯ ವಿಶಾಲವಾದ ನಿವೇಶನವನ್ನು ಕೊಡಿಸಿಕೊಡುವ ಜೊತೆಗೆ ಮಂಡ್ಯ ಮಹಾನಗರದಲ್ಲಿಯೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಆರ್ಯ ಈಡಿಗ ಭವನದ ನಿರ್ಮಾಣಕ್ಕೆ ನಿವೇಶನವನ್ನು ಕೊಡಿಸಿಕೊಡುವುದಾಗಿ ಸಚಿವ ನಾರಾಯಣಗೌಡ ಭರವಸೆ ನೀಡಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿಸಚಿವ ಹಾಗೂ ಸೊರಬ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪ ಮಾತನಾಡಿ ಹಾಲಿನಲ್ಲಿ ಸಕ್ಕರೆಯು ಬೆರೆಯುವಂತೆ ಸಮಾಜದ ಬಂಧುಗಳು ಎಲ್ಲಾ ಜಾತಿ ವರ್ಗಗಳ ಜೊತೆ ಅವಿನಾಭಾವದಿಂದ ಬೆರೆತು ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಕಳೆದ ಕೆ.ಆರ್.ಪೇಟೆ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣಗೌಡರ ಗೆಲುವಿಗೆ ನಿರ್ಣಾಯಕ ಶಕ್ತಿಯಾಗಿ ಕೆಲಸ ಮಾಡಿದ ಸಮಾಜದ ಬಂಧುಗಳಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದ ಕುಮಾರ್ ಬಂಗಾರಪ್ಪ ಕನ್ನಡದ ವರನಟ ಡಾ. ರಾಜಕುಮಾರ್ ಮತ್ತು ಮಾಜಿಮುಖ್ಯಮಂತ್ರಿಗಳಾದ ದಿ.ಎಸ್.ಬಂಗಾರಪ್ಪ ಆರ್ಯ ಈಡಿಗ ಸಮಾಜಕ್ಕೆ ಎರಡಿ ಕಣ್ಣುಗಳಿದ್ದಂತೆ. ನಾಡಿನ ಸಮಸ್ತ ಕನ್ನಡಿಗರ ಉಸಿರಿನಲ್ಲಿ ಬೆರೆತುಹೋಗಿದ್ದ ಡಾ.ರಾಜಕುಮಾರ್ ಅವರು ತಮ್ಮ ಮಗ ಶಿವಣ್ಣನಿಗೆ ಬಂಗಾರಪ್ಪನವರ ಮಗಳು ನನ್ನ ಸಹೋದರಿಯನ್ನು ಸೊಸೆಯನ್ನಾಗಿ ಸ್ವೀಕರಿಸಿದಾಗಲೇ ಅಣ್ಣಾವ್ರು ಈಡಿಗ ಸಮಾಜಕ್ಕೆ ಸೇರಿದವರು ಎಂದು ತಿಳಿದಿದ್ದು ಎಂದು ಅಭಿಮಾನದಿಂದ ಹೇಳಿದ ಅವರು ಬಂಗಾರಪ್ಪ ಅವರಿಗೆ ಮಂಡ್ಯ ಜನರ ಮೇಲೆ ವಿಶೇಷವಾದ ಪ್ರೇಮ, ಕಾವೇರಿ ನದಿಯ ನೀರಿನ ಹಂಚಿಕೆಯ ವಿಚಾರ ಬಂದಾಗ ಸುಗ್ರೀವಾಜ್ಞೆಯನ್ನು ಹೊರಡಿಸಿ ಮಂಡ್ಯ ಜಿಲ್ಲೆಯ ರೈತರ ಪರವಾಗಿ ಅಚಲವಾಗಿ ನಿಂತ ಹೋರಾಟಗಾರ ಬಂಗಾರಪ್ಪನವರು, ಇವರು ಕೈಗೊಂಡ ಒಂದೊಂದು ತೀರ್ಮಾನಗಳು ಇಂದು ಇತಿಹಾಸದ ಪುಟ ಸೇರಿವೆ ಎಂದು ಸ್ಮರಿಸಿದ ಕುಮಾರ್‍ಬಂಗಾರಪ್ಪ ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುವ ಸಚಿವ ನಾರಾಯಣಗೌಡರಂತಹ ರಾಜಕಾರಣಿಗಳು ಇಂದಿನ ಸಮಾಜದಲ್ಲಿ ಅಪರೂಪವಾಗಿದ್ದಾರೆ. ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ನಾರಾಯಣಗೌಡರನ್ನು ಗೆಲ್ಲಿಸಿ ತಾಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನಾರಾಯಣಗೌಡರು ಸಚಿವರಾಗಲು ಕೆ.ಆರ್.ಪೇಟೆ ತಾಲೂಕಿನ ಕೊಡು ಗೆಯು ಅನನ್ಯವಾಗಿದೆ ಎಂದರು.
ಆರ್ಯ ಈಡಿಗ ಸಮಾಜದ ಗರ್ತೀಕೆರೆ ನಾರಾಯಣಗುರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀ ಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡರಾದ ಪೆÇೀತರಾಜು, ಮಾಹಾನಗರಪಾಲಿಕೆ ಸದಸ್ಯ ಧೃವರಾಜು, ಮಂಡ್ಯ ನಗರಸಭೆಯ ಮಾಜಿ ಅಧ್ಯಕ್ಷ ಅರುಣಕುಮಾರ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್,ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ್,ಸಮಾಜದ ಮುಖಂ ಡರಾದ ನಂಜುಂಡ, ದೇವರಾಜು,ಪ್ರಕಾಶ್, ಚಂದ್ರೇಗೌಡ ಇತರರಿದ್ದರು.