ಈಡಿಗಿ ಅಭಿವೃದ್ಧಿ ನಿಗಮ ಪ್ರಾರಂಭಿಸಿ ಸೇಂದಿ ತೆಗೆಯಲು ಅವಕಾಶ ನೀಡುವಂತೆ ಪ್ರಣಮಾನಂದ ಸ್ವಾಮಿಜಿ ಒತ್ತಾಯ

ಸಿರವಾರ.ಜು.೧೭- ಆರ್ಯ ಈಡಿಗ ಸಮಾಜಕ್ಕೆ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು, ಕುಲಕಸಬಾದ ಸೇಂದಿ ಇಳಿಸುವುದಕ್ಕೆ ಸರ್ಕಾರ ಅವಕಾಶ ನೀಡಬೇಕು, ಕಲ್ಬುರ್ಗಿ ವಿ.ವಿ.ಯಲ್ಲಿ ಸಮಾಜದ ಗುರುಗಳಾದ ಬ್ರಹ್ಮರ್ಷಿ ನಾರಾಯಣಗುರುಗಳ ಅದ್ಯಾಯನ ಪೀಠವನ್ನು ಪ್ರಾರಂಭಿಸಬೇಕು ಎಂದು ಆರ್ಯ ಈಡಿಗ ಸಮಾಜದ ಗುರುಗಳಾದ ಹಾವೇರಿಯ ಪ್ರಣಮಾನಂದ ಗುರುಜಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆರ್ಯ ಈಡಿಗ ಸಮಾಜದ ಸಿರವಾರ ತಾಲೂಕ ಘಟಕ ರಚನೆ ಮಾಡಿ ನಂತರ ಮಾತನಾಡಿ ರಾಜ್ಯದಲ್ಲಿ ನಮ್ಮ ಸಮುದಾಯದ ೭೬ ಒಳಪಂಗಡದೊಂದಿಗೆ ಸಮಾಜ ೭೪ ಲಕ್ಷ ಜನಸಂಖ್ಯೆ ಹೊಂದಿದೆ.
ಹಿಂದೆ ೧೬ ಜನ ಶಾಸಕರನ್ನು ಹೊಂದಿತು, ೧ ಮುಖ್ಯಮಂತ್ರಿಯಾಗಿದರು, ೧೦ ಸಾವಿರ ಮನೆ ನಿರ್ಮಾಣ, ಕಲ್ಬುರ್ಗಿಯ ವಿವಿ ಪಠ್ಯ ಪುಸ್ತಕದಲ್ಲಿ ಹೆಸರು ಸೇರಿಸಬೇಕು. ೭೪ ಲಕ್ಷ ಜನಸಂಖ್ಯೆಗೆ ನಿಗಮ ಮಂಡಳಿ ಕೊಡಬೇಕು, ಸೇಂದಿ ಇಳಿಸುವದಕ್ಕೆ ಸರ್ಕಾರ ಅವಕಾಶ ನೀಡಬೇಕು, ನಾರಾಯಣ್ಣ ಗುರುಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ ಪ್ರಾರಂಭಿಸಬೇಕು. ಕಲ್ಬುರ್ಗಿ, ಯಾದಗಿರಿ, ರಾಯಚೂರು ಸೇರಿ ಯಾದಗಿರಿಯಲ್ಲಿ ಮುಂದಿನ ತಿಂಗಳು ಈಡಿಗ ಸಮಾಜದ ಸಹಕಾರಿ ಸಂಘವನ್ನು ಪ್ರಾರಂಭಿಸಿ ಧರ್ಮಸ್ಥಳ ಮಾದರಿಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಸಂಘ ಕೆಲಸ ಮಾಡುತ್ತದೆ.
ಬಡವರಿಗೆ, ವಿದ್ಯಾರ್ಥಿಗಳಿಗೆ, ವಿವಾಹಕ್ಕೆ ಸಾಲ ನೀಡಲಾಗುವುದು ಎಂದರು. ಜಿಲ್ಲಾದ್ಯಕ್ಷ ರಾಘವೇಂದ್ರ ಗೌಡ, ಸಮಾಜದ ತಾಲೂಕ ಅಧ್ಯಕ್ಷ ಈರಣ್ಣ ಗುತ್ತೆದಾರ ಬಾಗಲಾಡ, ಗೌರವ ಅಧ್ಯಕ್ಷ ರಾಗಿ ಅಶೋಕ ಚಾಗಭಾವಿ, ಉಪಾದ್ಯಕ್ಷರಾಗಿ ಶ್ರೀನಿವಾಸ, ಆಂಜನೇಯ್ಯ ನಾರಬಂಡ, ಯುವ ಘಟಕ ಅದ್ಯಕ್ಷ ಯಮನೂರು ದೇವತಗಲ್, ಉಪಾದ್ಯಕ್ಷ ಜಂಬಣ್ಣ ಗಣದಿನ್ನಿ, ಪ್ರ.ಕಾ ತಮ್ಮಣ್ಣ ಹೀರಾ, ಖಜಾಂಚಿಯಾಗಿ ಗುರುರಾಜ ಕವಿತಾಳ ಆಯ್ಕೆಯಾದರು. ಈ ಸಂದರ್ಭದಲ್ಲಿ ವಿವಿಧ ತಾಲೂಕ ಈಡಿಗ ಸಮಾಜದ ಮುಖಂಡರು ಇದ್ದರು.