ಈಜು ಸ್ಪರ್ಧೆಯಲ್ಲಿ ನಕ್ಷತ್ರನಿಗೆ ಮೂರು ಚಿನ್ನದ ಪದಕ

ದಾವಣಗೆರೆ, ಮಾ. 27 ; ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 20 ನೇ ರಾಷ್ಟ್ರೀಯ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಿದ್ಧಗಂಗಾ ಪ್ರಾಥಮಿಕ ಶಾಲೆಯ 9ನೇ ತರಗತಿ ಬಾಲಕ ನಕ್ಷತ್ರ ನಾಯಕ ಸಬ್ – ಜೂನಿಯರ್ ಗ್ರೂಪ್‌ನಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ, 50 ಮೀ. ಬ್ಯಾಕ್ಸ್ಟ್ರೋಕ್  ಮತ್ತು 50 ಮೀ. ಫ್ರೀ ಸ್ಟ್ರೋಕ್ ಸ್ವಿಮಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಬಾಲಕನಿಗೆ ಮುಖ್ಯೋಪಾದ್ಯಾಯಿನಿ ಎಸ್. ರೇಖಾರಾಣಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.