ಈಜು ಬಾರದೇ ಯುವಕ ನೀರು ಪಾಲು

ವಿಜಯಪುರ:ಎ.13: ಕೆರೆಯಲ್ಲಿ ಈಜಲು ಹೋಗಿ ಈಜಲು ಬಾರದೇ ಯುವಕ ನೀರು ಪಾಲಾಗಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿರುವ ಕೆರೆಯಲ್ಲಿ ನಡೆದಿದೆ.

ಅಲಿಯಾಬಾದ್ ಹೊರವಲಯದಲ್ಲಿರುವ ಕೆರೆಯಲ್ಲಿ ಮೂವರು ಗೆಳೆಯರು ಸೇರಿ ಈಜಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಗಜಾನಂದ ಒಂಬಾಸೆ (23) ಎಂಬ ಯುವಕ ನೀರು ಪಾಲಾಗಿದ್ದಾನೆ. ಉಳಿದ ಇಬ್ಬರು ಯುವಕರು ಈಜು ಬರುತ್ತಿದ್ದು, ಗಜಾನಂದ ಎಂಬ ಯುವಕನಿಗೆ ಈಜು ಬರದೇ ಇರುವುದು ಈ ಅನಾಹುತಕ್ಕೆ ಕಾರಣವಾಗಿದೆ.

ಯುವಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ ಹುಡುಕಾಟ ನಡೆಸಿದರೂ ಸಹಿತ ಇನ್ನೂ ಶವದ ಸುಳಿವು ದೊರೆತಿಲ್ಲ. ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.