ಈಜುಕೊಳಗಳು ಸಾರ್ವಜನಿಕರ ಸೇವೆಗೆ

ಗದಗ,ಆ23 : ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಈಜುಕೊಳ ಹಾಗೂ ರಾಜೀವಗಾಂಧಿ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಈಜುಕೊಳಗಳನ್ನು ದುರಸ್ಥಿಗೊಳಿಸಿ ಈಗಾಗಲೇ ಪ್ರಾರಂಭಿಸಲಾಗಿದೆ. ಸದರಿ ಈಜುಕೊಳಗಳಲ್ಲಿ ನುರಿತ ತರಬೇತುದಾರರದಿಂದ ಈಜು ತರಬೇತಿಯನ್ನು ನೀಡಲಾಗುತ್ತಿದೆ.
ಆಸಕ್ತ ಕ್ರೀಡಾಪಟುಗಳು ತರಬೇತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ದೂರವಾಣಿ ಸಂಖ್ಯೆ 08372-238345 ಹಾಗೂ ತರಬೇತುದಾರರಾದ ಶಿವಾನಂದ ಎಂ. ಮೊಬೈಲ್ ನಂ. 73386-89385 ಗೆ ಸಂಪರ್ಕಿಸಲು ಕೋರಲಾಗಿದೆ.