ಈಜಲು ಹೋದ ಯುವಕ ನೀರು ಪಾಲು

ಗಬ್ಬೂರು.ಏ.೦೧-ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಹೊರ ವಲಯದ ಹೊಸದಾಗಿ ನಿರ್ಮಿಸಿದ ಮೊರಾರ್ಜಿ ದೇಸಾಯಿ ವಸತಿ ನಿಲಯ ಪಕ್ಕದಲ್ಲಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯಲ್ಲಿ ನಡೆದಿದೆ.
ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವಕ ಶಿವು ಗದ್ದೆಮ್ಮ ಭಜಂತ್ರಿ ಬಿ.ಗಣೇಕಲ್(೨೫) ನೀರು ಪಾಲಾಗಿದ್ದಾನೆ. ರಕ್ಷಣಾ ತಂಡಗಳು ಯುವಕನ ಶೋಧ ಕಾರ್ಯ ನಡೆಸುತ್ತಿವೆ.ಎನ್ ಟಿಆರ್ ಎಫ್, ಪೋಲಿಸರು, ಅಗ್ನಿ ಶಾಮಕ ಸಿಬ್ಬಂದಿ, ಮತ್ತು ಸ್ಥಳೀಯರಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.