ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

ವಿಜಯಪುರ,ಏ 18: ಬಾವಿಯಲ್ಲಿ ಈಜಲು ಹೋದ ಯುವಕ ಈಜಲು ಬಾರದೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.
18 ವರ್ಷದ ರವಿ ಛಲವಾದಿ ಮೃತಪಟ್ಟಿರುವ ದುರ್ದೈವಿ. ಜಮೀನಿನಲ್ಲಿ ಕೆಲಸ ಮುಗಿಸಿ ಈಜಲು ಹೋದ ವೇಳೆ ಈಜಲು ಬಾರದೇ ಸಾವನ್ನಪ್ಪಿದ್ದಾನೆ. ರವಿಯ ಮೃತದೇಹವನ್ನು ಸ್ಥಳೀಯರು, ಅಗ್ನಿ ಶಾಮಕ ಸಿಬ್ಬಂದಿಗಳು ಹೊರಗಡೆ ತೆಗೆದಿದ್ದಾರೆ. ಕೂಡಗಿ ಎನ್‍ಟಿಪಿಸಿ ಪೆÇಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.