ಈಜಲು ಹೋದ ಮೂವರು ಬಾಲಕರು ನೀರು ಪಾಲು

ಜಗಳೂರು.ನ.೧೪; ಈಜಾಡಲೆಂದು ತೆರಳಿದ ಮೂವರು ಬಾಲಕರು ಸಾವನ್ನಪ್ಪಿದ  ಘಟನೆ ಪಟ್ಟಣದ ದೊಡ್ಡಕೆರೆಯಲ್ಲಿ‌ ನೆಡೆದಿದೆ.ಮೃತಪಟ್ಟ ಬಾಲಕರು ಪೈಜಾನ್ ( 8 ),
ಅಫಾನ್  (10 ) ಹಾಗೂ ಆಷೀಕ್ (8 ) ಎಂದು ತಿಳಿದು ಬಂದಿದೆ.ನಿನ್ನೆ ಮಧ್ಯಾಹ್ನಬಾಲಕರು ಈಜಾಡಲು ಹೋಗಿದ್ದಾರೆ ಈ ವೇಳೆ ದೊಡ್ಡಗುಂಡಿಯಲ್ಲಿ ಸಿಕ್ಕಿ ಮೃತ ಪಟ್ಟಿದ್ದಾರೆ ಸಂಜೆ ವೇಳೆಗೆ ಕುಟುಂಬದವರು  ಕೆರೆಯ ಸುತ್ತ ಮುತ್ತ ಹುಡುಕಾಡಿದಾಗ ಕೆರೆ ದಂಡೆಯ ಮೇಲೆ ಬಟ್ಟೆಗಳು ಇರುವುದು ಕಂಡು ತಕ್ಷಣ ಪೋಲೀಸ್ ಠಾಣೆಗೆ ವಿಷಯ ತಿಳಿಸಿದ್ದು ಸಂಜೆ ಆರು ಗಂಟೆ ವೇಳೆಗೆ ಅಗ್ನಿಶಾಮಕ ದಳದವರು ಪತ್ತೆ ಕಾರ್ಯಚರಣೆ ನಡೆಸಿದರು. ಕತ್ತಲಾದಂತೆ ಕಾರ್ಯಚರಣೆ ಸಾಧ್ಯವಾಗಲಿಲ್ಲ ನಂತರ ರಾತ್ರಿ ಎಂಟು ಗಂಟೆಗೆ ಪಟ್ಟಣದ ಪೊಲೀಸ್ ಇಲಾಖೆ ಅಗ್ನಿಶಾಮಕದಳ ಜಂಟಿ ಕಾರ್ಯಚರಣೆ ನಡೆಸಿದಾಗ  ಬಾಲಕರ ಮೃತ ದೇಹ ಪತ್ತೆಯಾಗಿದೆ.ಈ ಕಾರ್ಯಾಚರಣೆಯಲ್ಲಿ ಜಗಳೂರುಪೊಲೀಸ್ ಅರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ,  ಅಗ್ನಿಶಾಮಕ ದಳದ ಪಿ.ಎಸ್.ಐ ಹನುಮಂತರಾಯ ಮತ್ತು ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಇದ್ದರು.