ಈಜಲು ಹೋದ ನಾಲ್ವರು ಘಟಪ್ರಭಾ ಪಾಲು

ಬೆಳಗಾವಿ,ಏ.14- ಈಜಲು ಹೋಗಿದ್ದ ನಾಲ್ವರು ಸ್ನೇಹಿತರು ಘಟಪ್ರಭಾ ನದಿಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಗೋಕಾಕ ತಾಲೂಕಿನ ದೂಪದಾಳ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ.
ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದ ಸಂತೋಷ ಬಾಬು ಇಟಗಿ(18), ಅಜಯ್ ಬಾಬು ಜೋರೆ(18), ಕೃಷ್ಣಾ ಬಾಬು ಜೋರೆ(22) ಮತ್ತು ಆನಂದ ಕೋಕರೆ(19) ಮೃತಪಟ್ಟವರು.
ಮೃತಪಟ್ಟ ನಾಲ್ವರು ಯುವಕರು ಘಟಪ್ರಭಾದ ಬಾರ್‌ವೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ಇಂದು ರಜೆ ಇದ್ದುದರಿಂದ ಈಜಲು ಹೋಗಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಘಟಪ್ರಭಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.