ಈಗಲೂ ನಾನು ಪವರ್ ಫುಲ್: ಡಾ.ಪರಮೇಶ್ವರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.06: ಪಕ್ಷದಲ್ಲಿ ನಾನು ಮೂಲೆ ಗುಂಪಾಗಿಲ್ಲ. ಹಿಂದೆ ಸರಿದಿಲ್ಲ. ಈಗಲೂ ನಾನು ಪವರ್ ಫುಲ್ಲಾಗಿದ್ದೇನೆ ಮುಖ್ಯ ಮಂತ್ರಿಗಳ ಆಕಾಂಕ್ಷಿಗಳಲ್ಲಿ ನಾನೂ ಒಬ್ಬನು ಎಂದು ಮಾಜಿ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಅವರು ನಿನ್ನೆ ಸಂಜೆ  ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ. ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಾಗಿಲ್ಲ. ಕೆಪಿಸಿಸಿಯಲ್ಲಿ ಅವರವರಿಗೆ ನೀಡಿರುವ ಜವಾಬ್ದಾರಿಗಳನ್ನು ಮುಂಚೂಣಿಯಲ್ಲಿದ್ದು ಮಾಡುತ್ತಿದ್ದಾರೆಂದರು.
ದಲಿತ ಮುಖ್ಯ ಮಂತ್ರಿ ಬಗ್ಗೆ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿ. ನಮ್ಮ ಪಕ್ಷದಲ್ಲಿ ಈವರೆಗೆ ರಾಜ್ಯದಲ್ಲಿ ದಲಿತ ಮುಖ್ಯ ಮಂತ್ರಿ ಮಾಡಿಲಾಗಿಲ್ಲ , ಆದರೆ ನೀವು ದಲಿತ ಮುಖ್ಯ ಮಂತ್ರಿ‌ ಯಾಕೆ ಮಾಡಲಿಲ್ಲ ಎಂದು ಜೆಪಿಯವರನ್ನು ಪ್ರಶ್ನಿಸಿದರು. ನಮ್ಮ 18 ಜನ ಶಾಸಕರನ್ನು ಆಪರೇಷನ್ ಮಾಡಿ,ಜಂಟಿ ಸರ್ಕಾರವನ್ನು ಕೆಡವಿದ್ದು ಬಿಜೆಪುಯವರು, ನಮ್ಮ ಪಕ್ಷದಿಂದ ಅಲ್ಲ ಎಂದು ಸಮರ್ಥಿಸಿಕೊಂಡರು.
ಮುಖ್ಯ ಮಂತ್ರಿ ವಿಚಾರದಲ್ಲಿ ರಾಜ್ಯದಲ್ಲಿ ಪಕ್ಷ ಬಹುಮತಕ್ಕೆ ಬಂದರೆ ಶಾಸಕಾಂಗ ಸಭೆ ಕರೆದು, ಶಾಸಕರ ಒಲವು ಇರುವವರನ್ನು ಮುಖ್ಯ ಮಂತ್ರಿ ಆಯ್ಕೆ ಮಾಡಲಿದೆ. ಅದರಲ್ಲೂ ನಾನು ಇರಬಹುದು ಎಂದರು.ಸಿದ್ರಾಮಯ್ಯ ಅವರು ಸಿಎಂ ಅವರಿಗೆ ನಾಯಿ ಮರಿ ಎಂದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.‌
ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 52 ಜಾತಿ ಗಳಿವೆ. ಈ ಸಮುದಾಯಗಳು ಅನೇಕ ಕಾರಣದಿಂದ ಹಂಚಿಹೋಗಿರುವುದರಿಂದ ಅಭಿವೃದ್ಧಿ ಆಗಿಲ್ಲ. ಅದಕ್ಕಾಗಿ ಒಗ್ಗಟ್ಟು ಮಾಡಿ ಮುಂಬರುವ ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ‌ಜೊತೆಗಿರಲಿದೆಂಬ ಭರವಶೆ ನೀಡಲು, ಮತ್ತು ಬಿಜೆಪಿಯವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಅದರ ಕುರಿತು ಜಾಗೃತಿ ಮೂಡಿಸಬೇಕಿದೆ. 2013- 18 ರಲ್ಲಿ ಶೇ 24 ರಷ್ಟು ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟು 88 ಸಾವಿರ ಕೋಟಿ ರೂ ಖರ್ಚು ಮಾಡಿತ್ತು. ಅದರೆ ಬಿಜೆಪಿ ಸರ್ಕಾರ ಕೇವಲ 28 ಸಾವಿರ ಕೋಟಿ ಇಟ್ಟು ಅದರಲ್ಲಿ 8 ಸಾವಿರ ಕೋಟಿಯನ್ನು ಬೇರೆ ಯೋಜನೆಗಳಿಗೆ ಉಪಯೋಗಿಸಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಭೂ ಮಂಜೂರು, ಗಂಗಾ ಕಲ್ಯಾಣ, ಸ್ವ ಉದ್ಯೋಗ, ಕೈಗಾರಿಕೆಗಳ ಸ್ಥಾಪನೆ, ಪ್ರೋತ್ಸಾಹ ಧನ ನೀಡಿಕೆ ಮೊದಲಾದವುಗಳನ್ನು ಸ್ಥಗಿತ ಮಾಡಿದ್ದಾರೆ. ಮೀಸಲಾತಿ ಪ್ರಮಾಣದ ಹೆಚ್ಚಳ ಮಸೂದೆ ಪಾಸಾಗಿದೆ. ಆದರೆ ಲೋಕಸಭೆಯಲ್ಲಿ ಇದು ಆಗುವುದಿಲ್ಲ ಎಂದು ಬಿಜೆಪಿ ಹೇಳಿದೆ ಇದನ್ನು ತಿಳಿಸಲಿದೆ ನಾವು ಅಧಿಕಾರಕ್ಕೆ ಬಂದರೆ ಹೆಚ್ಚಿನ ನೆರವು ನೀಡಲಿದೆ.ಇ ದೆಲ್ಲದರ ಬಗ್ಗೆ ತಿಳಿಸಲು ಚಿತ್ರದುರ್ಗದಲ್ಲಿ ಜ 8 ರಂದು ಎಸ್ಸಿ, ಎಸ್ಟಿ ಸಮಾವೇಶ ಮಾಡುತ್ತಿದೆ.‌ಐದು ಲಕ್ಷ ಜನರು ಸೇರಲಿದ್ದಾರೆ. 224 ಕ್ಷೇತ್ರಗಳಲ್ಲಿ ಈ ಸಮುದಾಯಗಳು ಇವೆ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆ ಮತ ಹಾಕುವಂತೆ ಮಾಡಲು ಸಮಾವೇಶದಲ್ಲಿ ಕೇಳಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವರಾದ ಡಾ.ಮಹದೇವಪ್ಪ, ಪಿ.ಟಿ.ಪರಮೇಶ್ವರ ನಾಯ್ಕ, ಈ ತುಕರಾಂ, ಮಾಜಿ ಸಂಸದ ಚಂದ್ರಪ್ಪ, ಶಾಸಕ ಬಿ.ನಾಗೇಂದ್ರ, ಮಾಜಿ ಎಂ.ಎಲ್.ಸಿ ಕೆಎಸ್ ಎಲ್ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಎಸ್ಟಿ ಘಟಕದ ಅಧ್ಯಕ್ಷ ಎರುಕಲಸ್ವಾಮಿ ಮೇಯರ್ ಎಂ.ರಾಜೇಶ್ವರಿ ಜಿಲ್ಲೆಯ ಮಯಖಂಡರುಗಳಾದ ಎ.ಮಾನಯ್ಯ, ಅಲ್ಲಂ ಪ್ರಶಾಂತ್, ಮುಂಡ್ರಿಗಿ ನಾಗರಾಜ್, ಶಿವರಾಜ್ ಹೆಗಡೆ ಮೊದಲಾದವರು ಇದ್ದರು.