ಇ.ಪಿ.ಎಫ್ ನೌಕರರ ಸಂಘದ ಕಾರ್ಯದರ್ಶಿಯಾಗಿ ಹೆಳವರ ಪುನರಾಯ್ಕೆ

ಕಲಬುರಗಿ: ಎ.27:ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ, ಕ್ಷೇತ್ರೀಯ ಕಛೇರಿಯ ವ್ಯಾಪ್ತಿಗೆ ಕಲಬುರಗಿ, ವಿಜಯಪುರ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳು ಬರುತ್ತವೆ. ಈ ಕಾರ್ಯಾಲಯದ ನೌಕರರ ಸಂಘದ ಕಾರ್ಯದರ್ಶಿಯಾಗಿ ಬಸವರಾಜ ಹೆಳವರ ಯಾಳಗಿ 2023-25ರ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಕಲ್ಪನಾ ಮಧಬಾವಿ, ಸಹ ಕಾರ್ಯದರ್ಶಿಯಾಗಿ ಜಗನ್ನಾಥ, ಖಜಾಂಚಿಯಾಗಿ ಪ್ರಶಾಂತ ಇಂಗಳೇಶ್ವರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೋಹ್ಮದ ಯೂಸುಫ್, ಪ್ರಶಾಂತ ತಮದಡ್ಡಿ, ಚಿಂತಾಲಾ ಗೋಪಿಕೃಷ್ಣ, ಸವಿತಾ ಬಲಗಲಿ, ಶಿವಶರಣಪ್ಪ ಶಿವಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.