ಇ.ಪಿ.ಎಫ್ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ವಾಚನ

ಕಲಬುರಗಿ:ಸೆ.15: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಪ್ರಾದೇಶಿಕ ಕಛೇರಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಸೆ.15ರಂದು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಲು ಭಾರತೀಯ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತ ರವಿ ಯಾದವ್, ನೌಕರರ ಮನೋರಂಜನ ಸಂಘದ ಕಾರ್ಯದರ್ಶಿ ಬಸವರಾಜ ಹೆಳವರ, ಶಿವರಾಜ, ಜಿ.ಎಂ ಅಪ್ಸರ್, ವಿಠ್ಠಲ, ಮಾರು ಅಖೀಲ್, ಮದನ್ ಕುಲಕರ್ಣಿ, ಕಲ್ಪನಾ ಮಧಬಾವಿ, ಪ್ರಶಾಂತ ಇಂಗಳೇಶ್ವರ, ಕೇಶವರಾವ್, ಅರುಣಕುಮಾರ, ಶಿವಶರಣಪ್ಪ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು.