ಇ ಖಾತಾ ಮಾಡಿಸಿ ಭದ್ರವಾಗಿ ಇಟ್ಟುಕ್ಕೊಳ್ಳಿ

ರಾಯಚೂರು.ಜ.೨೦-ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಕರ್ನಾಟಕ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಡಾ. ಎಸ್, ಶಿವರಾಜ ಪಾಟೀಲ್ ಶಾಸಕರು, ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ ಸಿಯಾತಾಲಾಬ್ ಏರಿಯಾದಲ್ಲಿ ” ಹಕ್ಕುಪತ್ರ ” ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ವಾರ್ಡ್‌ಗಳಿಗೆ ಹೋಗಿ ಇದೇ ರೀತಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು, ಹಕ್ಕುಪತ್ರ ತೆಗಿದುಕೊಂಡು ಹೋದ ಮೇಲೆ ಇ ಖಾತಾ ಮಾಡಿಸಿ ಅದನ್ನು ಭದ್ರವಾಗಿ ಇಟ್ಟುಕ್ಕೊಳ್ಳಿ ಇದು ಅಮೂಲ್ಯವಾದದ್ದು ಎಂದು ನಗರ ಶಾಸಕರಾದ ಡಾ.ಎಸ್ ಶಿವರಾಜ್ ಪಾಟೀಲ್ ತಿಳಿಸಿದರು.