ಇ.ಎಸ್.ಐ. ಆಸ್ಪತ್ರೆ ನಿವೇಶನಕ್ಕಾಗಿ ಉಪವಾಸ ಸತ್ಯಾಗ್ರಹ

ಬಳ್ಳಾರಿ, ಏ.17: ಜಿಲ್ಲೆಗೆ ಮಂಜೂರಾಗಿರುವ ಕೇಂದ್ರ ಸರ್ಕಾರದ ಇ.ಎಸ್.ಐ ಆಸ್ಪತ್ರೆಗೆ ಅಗತ್ಯ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಶ್ರೀ ಶಿವಕುಮಾರಸ್ವಾಮಿ, ಇ.ಎಸ್.ಐ.ಸಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸೇವಾ ಸಂಘ ಹಾಗೂ ಸಿ.ಐ.ಟಿ.ಯುನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.