
ಮಾನ್ವಿ,ಅ.೦೫- ನಗರದ ಮುಸ್ಲಿಮ್ ಯುವಕರು ಹತ್ತಾರು ವರ್ಷಗಳಿಂದ ಸಮಾಜಸೇವೆ ಮಾಡುವುದರ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕಡಿಮೆ ಪೀಸ್ ನಲ್ಲಿ ಗುಣಮಟ್ಟದ ಶಿಕ್ಷಣ ನೀಡುವದರೊಂದಿಗೆ ಮಾನ್ವಿ ನಗರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ತಾಲೂಕ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಚ್. ಶರ್ಫುದ್ದೀನ್ ಪೊತ್ನಾಳ ಹೇಳಿದರು
ಅವರು ಇಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಬಿಐಇ ಮಾನ್ವಿ ಯೂನಿಟ್ ವತಿಯಿಂದ ಕರ್ನಾಟಕ ಫಂಕ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು ಇಂದು ಮುಸಲ್ಮಾನ ಸಮಾಜ ಬದಲಾಗಿದೆ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರನ್ನ ಒಳಗೊಂಡಂತೆ ತಮ್ಮ ಮಕ್ಕಳನ್ನು ಉತ್ತಮ ಸಾಧನೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದೆ ಇದು ಒಂದು ಒಳ್ಳೆಯ ವಿಷಯ, ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಮೌಲ್ಯಗಳನ್ನು ತರುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ನೈತಿಕ ಪಾಠಗಳನ್ನು ಹೇಳುವ ಕೋರ್ಸುಗಳನ್ನು ಮಾಡಿಸುವುದು ಬಹಳ ಉತ್ತಮ ಕಾರ್ಯ ಎಂದು ಅವರು ಹೇಳಿದರು.
ನಂತರ ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ, ಪುರಸಭೆ ಸದಸ್ಯ ಫರೀದ್ ಉಮರಿ ಜಮಾತ್ ಇಸ್ಲಾಂ ಅಧ್ಯಕ್ಷ ಅಬ್ದುಲ್ ರಹಮಾನ್ ಮಾತನಾಡಿ ನಗರದ ಜಾಮಿಯತುಲ್ ಮೊಮಿನಾತ್, ಅಲ್ಫುರ್ಖಾನ್, ಮಾನವಿ ಪಬ್ಲಿಕ್ ಸ್ಕೂಲ್, ಕಾಕತೀಯ, ಜ್ಞಾನ ನಿಧಿ, ಲಿಟಲ್ ಸ್ಟಾರ್, ಮತ್ತು ಅಲ್ ಹಿರಾ ಶಾಲೆಗಳ ಸುಮಾರು ೩೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಮಕ್ಕಳಲ್ಲಿ ಕಲಿಕಾ ಚಟುವಟಿಕೆಯ ಜೊತೆಗೆ ಸಂಸ್ಕಾರ ಮತ್ತು ನೈತಿಕತೆ ಬೆಳೆಸುವ ನಿಟ್ಟಿನಲ್ಲಿ ಜಮಾತ್ ಇಸ್ಲಾಂ ೨೦೦೭ ರಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯನ್ನ ಸ್ಥಾಪನೆ ಮಾಡಿದೆ ಈ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಸದುಪಯೋಗ ಪಡೆದಿರುವುದು ಸಂತೋಷ ದ ವಿಷಯ ಎಂದು ಮೌಲಾನ ಅನ್ವರ್ ಪಾಷ ಉಮರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಮೊಹಮ್ಮದ್ ಹಾರೂನ್ ಅವರು ಸ್ವಾಗತಿಸಿದರು, ಎಂ ಎ ಎಚ್ ಮುಖೀಮ್ ಪ್ರಾಸ್ತಾವಿಕ ಮಾತನಾಡಿದರು, ಅಲೀಮ್ ಖಾನ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಮಾತೆ ಇಸ್ಲಾಂ ಉಪಾಧ್ಯಕ್ಷ ಅಬ್ದುಲ್ ರಹೀಮ್, ಎಜುಕೇಶನ್ ಶಾಲೆಯ ಮುಖ್ಯಸ್ಥ ಹುಸೇನ್ ಭಾಷಾ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಾಹೇದಾ ಬೇಗಂ, ಜೀ ಐ ಓ ವಿದ್ಯಾರ್ಥಿನಿ ಸಂಘಟನೆಯ ಮುಖ್ಯಸ್ಥೆ, ಅಸ್ಮ ಬೇಗಂ ಉಪಸ್ಥಿತರಿದ್ದರು.