ಇಸ್ರೋ ಸಾಧನೆ ಇಡೀ ದೇಶದ ಹೆಮ್ಮೆ

ಶಹಾಬಾದ:ಆ.25:ಭಾರತದ ಮಹಾತ್ವಕಾಂಕ್ಷೆಯ ‘ಚಂದ್ರಯಾನ-3’ ಸಾಧನೆಗೆ ಇಡೀ ಭಾರತ ದೇಶ ಹೆಮ್ಮೆ ಪಡುವಂತಾ ಸುದಿನ ಬಂದಿದೆ ಎಂದು ಪ್ರಾಚಾರ್ಯ ಚಂದ್ರಶೇಖರ ಅವರು ಹೇಳಿದರು. ಅವರು ನಗರದ ಬಸಮ್ಮ ಗುರುಬಸಪ್ಪ ಗೊಳೇದ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಯನ್ನು ವಿವರಣೆ ನೀಡುತ್ತ ಮಾತನಾಡಿದರು. ಇಸ್ರೋ ಸಾಧನೆಯಿಂದ ರಾಷ್ಟ್ರದ ಹೆಮ್ಮೆ ಇಮ್ಮಡಿಯಾಗಿದ್ದು, ಭಾರತ ದೇಶ ವಿಶ್ವದಲ್ಲಿ ಯಾವುದರಲ್ಲಿ ಕಮ್ಮಿ ಇಲ್ಲ ಎಂದು ಸಾಭೀತುಮಾಡಿ ತೋರಿಸಿದ್ದಾರೆ. ಚಂದ್ರಯಾನ ಯಶಸ್ಸಿಗೆ ದುಡಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗುರುವಾರ ಪ್ರಕಟಗೊಂಡ ದಿನ ಪತ್ರಿಕೆ ಪ್ರತಿಯೊಬ್ಬರು ಶೇಖರಿಸಿ ಇಡುವಂತೆ ಮಾರ್ಗದರ್ಶನ ಮಾಡಿದರು, ಹಾಗೂ ಕಾಲೇಜಿನ ಕಾರ್ಯದರ್ಶಿಗಳಾದ ಭೀಮಾಶಂಕರ ಮುತ್ತಟ್ಟಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಕೆಯನ್ನು ನೀಡಿ ಚಂದ್ರಯಾನದ ಎಲ್ಲಾ ಸಾಧನೆಯನ್ನು ಓದಿ ಪತ್ರಿಕೆಯನ್ನು ಜೋಪಾನವಾಗಿ ಇಡಲು ಸಲಹೆ ನೀಡಿದರು.


” ಇಸ್ರೋ ಮಾಡಿದ ಸಾಧನೆಯನ್ನು ಪ್ರತಿಯೊಬ್ಬ ಭಾರತಿಯಗೆ ಹೆಮ್ಮೆ ಪಡೆದು, ದೇಶದ ಬಗ್ಗೆ ಗೌರವ ಹೆಚ್ಚಿಸಿದೆ, ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸದೊಂದಿಗೆ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ಹೆಚ್ಚಿಸಬೇಕು”

            ಭೀಮಾಶಂಕರ ಮುತ್ತಟ್ಟಿ. ಕಾಲೇಜಿನ ಕಾರ್ಯದರ್ಶಿ.