ಇಸ್ರೋ ವಿಜ್ಞಾನಿಗಳಿಗೆ ಸಚಿವ ದರ್ಶನಾಪುರ ಅಭಿನಂದನೆ

ಶಹಾಪುರ:ಆ.27: ಚಂದ್ರನ ದಕ್ಷಿಣ ದ್ರುವದ ಮೇಲೆ ಚಂದ್ರಯಾನ 3 ನೌಕೆಯ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವುದು ನಮ್ಮ ಭಾರತ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಹರ್ಷ ವ್ಯಕ್ತಪಡಿಸಿದರು.
ಇಂದು ಭಾರತದ ತಂತ್ರಜ್ಞಾನವು ಇತಿಹಾಸದಲ್ಲಿ ಅತ್ಯಂತ ಮಹತ್ವದ ಕಾರ್ಯವನ್ನು ಮಾಡಿದೆ ವೇದ ಪುರಾಣಗಳಲ್ಲಿ ಋಷಿಮುನಿಗಳು ತಂತ್ರಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಿ ಹೋಗಿದ್ದಾರೆ. ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ನೌಕೆಯು ತುಂಬಾ ಯಶಸ್ವಿಯಾಗಿ ನಿಗದಿತ ಸ್ಥಳವನ್ನು ತಲುಪಿರುವವದು ತುಂಬಾ ಸಂತಸದ ವಿಷಯವಾಗಿದೆ ಭಗವಂತನ ಕೃಪೆ ವಿಜ್ಞಾನಿಗಳ ಸಾಕಷ್ಟು ಪರಿಶ್ರಮ ಭಾರತ ಸರ್ಕಾರದ ಸಹಕಾರದೊಂದಿಗೆ ಇಡಿ ದೇಶದ ಜನರ ಶುಭ ಹಾರೈಕೆಯ ಫಲವಾಗಿ ಇಂದು ಚಂದ್ರಯಾನ ಯಶಸ್ವಿಯಾಗಿದೆ. ಇನ್ನು ಹತ್ತಾರು ಸಂಶೋಧನೆಗಳು ನಮ್ಮ ದೇಶದ ವಿಜ್ಞಾನಿಗಳಿಂದ ಮೂಡಿರಬರಲಿ ದೇಶಕ್ಕೆ ಕೀರ್ತಿ ತಂದ ಎಲ್ಲಾ ವಿಜ್ಞಾನಿಗಳಿಗೂ ಇಸ್ರೋ ಸಂಸ್ಥೆಗೂ ಶರಣಬಸಪ್ಪಗೌಡ ದರ್ಶನಾಪುರ ಅಭಿನಂದನೆ ತಿಳಿಸಿ ಶುಭ ಹಾರೈಸಿದರು