ಇಸ್ರೋ ವಿಜ್ಞಾನಿಗಳಾಗಿ,ಶಾಸಕ ಡಾ ಶ್ರೀನಿವಾಸ ಕರೆ .


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ 5 :- ಹಿಂದುಳಿದ ಕೂಡ್ಲಿಗಿ ತಾಲೂಕಿನಲ್ಲಿ ಬಹಳಷ್ಟು ವರ್ಷಗಳ ನಂತರ ಪ್ರಾರಂಭವಾಗಿರುವ ಬಿಎಸ್ಸಿ ಕೋರ್ಸ್ ಆರಂಭವಾಗಿದ್ದು ಇದನ್ನು ನಮ್ಮ ಭಾಗದ ಬಡ ಮಕ್ಕಳು ಇದರ ಸದುಪಯೋಗದಿಂದ   ಉತ್ತಮ ಶಿಕ್ಷಣ ಪಡೆದು ಇಸ್ರೋದಲ್ಲಿ ನಮ್ಮ ಭಾಗದಿಂದ ವಿಜ್ಞಾನಿಗಳಾಗಿ ಆಯ್ಕೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕಿವಿ ಮಾತು ಹೇಳಿದರು.
ಅವರು ಇಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿಜ್ಞಾನ ವಿಭಾಗಕ್ಕೆ ಬೇಕಾದ ಹೊಸದಾಗಿ ತರಗತಿ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ 150 ಲಕ್ಷ ರೂಪಾಯಿಗಳ ಮೊತ್ತದ ಕಾಮಗಾರಿಗೆ  ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತ ಕೂಡ್ಲಿಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಬಿಎಸ್ಸಿ ಪದವಿ ಪಡೆಯಲು ಪಕ್ಕದ ತಾಲೂಕಿಗೆ ಹೋಗಬೇಕಿತ್ತು ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಬಿಎಸ್ಸಿ ಪದವಿ ಪಡೆಯುವುದು ಗಗನ ಕುಸುಮವಾಗಿತ್ತು ಇದನ್ನರಿತು ಕೂಡ್ಲಿಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಪ್ರಸಕ್ತ ಸಾಲಿನಿಂದಲೇ ಬಿಎಸ್ಸಿ ಕೋರ್ಸ್ ಪ್ರಾರಂಭಿಸುವ ಮೂಲಕ ಹಿಂದುಳಿದ ತಾಲೂಕಿಗೆ ಅನುಕೂಲ ಮಾಡಿಕೊಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.ತರಗತಿ ಕಟ್ಟಡ ಹಾಗೂ ಶೌಚಾಲಯಗಳನ್ನು ಅತ್ಯಂತ  ವ್ಯವಸ್ಥಿತವಾಗಿ  ನಿರ್ಮಾಣ ಮಾಡಬೇಕು ಎಂದು  ಗುತ್ತಿಗೆಧಾರರಿಗೆ ಶಾಸಕರು  ಕಟ್ಟುನಿಟ್ಟಾಗಿ ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್ ಎ ವಿ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಎನ್ ನಿಂಗಪ್ಪ, ಕಾಲೇಜು ಅಭಿವೃದ್ಧಿ ಉಸ್ತುವಾರಿ ಸಮಿತಿಯ ಸಿದ್ದಪ್ಪ, ನಾಗರಾಜ, ಸಿದ್ದೇಶ, ಸಾವಜ್ಜಿ ಶಿವಪ್ರಸಾದ್ ಗೌಡ ಕಾವಲ್ಲಿ ಶಿವಪ್ಪ ನಾಯಕ ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಇತರರಿದ್ದರು.

One attachment • Scanned by Gmail