ಇಸ್ರೋಗೆ ಮತ್ತೊಂದು ಗರಿ: ಇಒಎಸ್-01 ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿ ಕೋಟಾ,ನ. 7- ಭೂಪರಿವೀಕ್ಷಣೆ ಉಪಗ್ರಹ ಸೇರಿದಂತೆ ಹತ್ತು ಉಪಗ್ರಹ ಹೊಂದಿದ್ದ ಪಿಎಸ್ ಎಲ್ ವಿ -ಸಿ-49 ಹೊತ್ತ ಇಒಎಸ್-01 ಇದು ಯಶಸ್ವಿ ಉಡಾವಣೆಯಾಗಿದೆ.

ಆಂದ್ರ‌ಪ್ರದೇಶದ ಶ್ರೀಹರಿಕೋಟಾದಿಂದ‌ 3 ಗಂಟೆ 12 ,ನಿಮಿಷಕ್ಕೆ ಉಪಗ್ರಹ ಯಶಸ್ವಿಯಾಗುತ್ತಿದ್ದಂತೆ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಡಾ.ಕೆ ಶಿವನ್ ಸೇರಿದಂತೆ ವಿಜ್ಞಾನಿಗಳು ಸಂತೋಷ ಹಂಚಿಕೊಂಡರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‌ ಉಪಗ್ರಹ ಉಡಾವಣೆಯನ್ನು 3ಗಂಟೆ 2ನಿಮಿಷಕ್ಕೆ ನಿಗದಿ ಮಾಡಿತ್ತು. ಮಳೆ ಹಾಗು ಹವಾಮಾನ ವೈಪರಿತ್ಯ ಬದಲಾವಣೆ ಯಿಂದಾಗಿ ಉಡಾವಣೆ ಸಮಯವನ್ನು 3 ಗಂಟೆ 12 ನಿಮಿಷಕ್ಕೆ ಮರು ನಿಗದಿ ಮಾಡಲಾಯಿತು.

ಭೂ ಪರಿವೀಕ್ಷಣಾ ಉಪಗ್ರಹ ಹೊತ್ತು ಸಾಗಿದ್ದು‌ ಕೃಷಿ,ಅರಣ್ಯ ಸೇರಿದಂತೆ ಅನೇಕ ಉಪಯುಕ್ತ ಮಾಹಿತಿಯನ್ನು ರವಾನೆ ಮಾಡಲಿದೆ.ಇಸ್ತೋ ಇಂದು ಉಡಾವಣೆ ಮಾಡಿದ ಉಪಗ್ರಹದಲ್ಲಿ 9 ಅಂತರಾಷ್ಟ್ರೀಯ ಉಪಗ್ರಗಳು ಸೇರಿವೆ.

ಸತೀಶ್ ಧವನ್ ಕೇಂದ್ರ ದಲ್ಲಿ ಸಂತಸ

ಶ್ರೀ ಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್‌ವಿ -ಸಿ.49 ಯಶಸ್ವಿಯಾಗಿ ಉಡಾವಣೆಯಾಗುತ್ತಿದ್ದಂತೆ ಇಸ್ತೋ ಕೆ.ಶಿವನ್ ಅವರು ವಿಜ್ಞಾನಿಗಳಿಗೆ ಶುಭ ಹಾರೈಸಿದರು.ಉಪಗ್ರಹವನ್ನು ವಿಜ್ಞಾನಿಗಳು ಪಥಕ್ಕೆ ಸೇರಿಸುತ್ತಿದ್ದಂತೆ ವಿಜ್ಞಾನಿಗಳು ಪರಸ್ಪರ‌ ಸಂತಸ ಹಂಚಿಕೊಂಡರು.