ಇಸ್ರೇಲ್ ಗೆ ತಕ್ಕ ಪಾಠ ಕಲಿಸಬೇಕು

ಟೆಲ್ ಅವಿವ್, ನ.೨- ಹಮಾಸ್ ನ ಹಿರಿಯ ಸದಸ್ಯರೊಬ್ಬರು ಇಸ್ರೇಲ್ ಮೇಲಿನ ದಾಳಿಯನ್ನು ಶ್ಲಾಘಿಸಿದ್ದಾರೆ. ಇಸ್ರೇಲ್ ಸರ್ವನಾಶವಾಗುವವರೆಗೆ ಭವಿಷ್ಯದಲ್ಲಿ ಇದೇ ರೀತಿಯ ದಾಳಿಗಳನ್ನು ಹಲವು ಬಾರಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋ ಸದಸ್ಯ ಘಾಜಿ ಹಮದ್ ದಾಳಿಯ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಭೂರಹಿತ ದೇಶ. ನಾವು ಅದನ್ನು ಜಗತ್ತಿನಿಂದ ಅಳಿಸಿಹಾಕಿ ಬೇಕು. ಏಕೆಂದರೆ ಇದು ಅರಬ್ ಮತ್ತು ಇಸ್ಲಾಮಿಕ್ ದೇಶಗಳಿಗೆ ಭದ್ರತೆ, ಮಿಲಿಟರಿ ಮತ್ತು ರಾಜಕೀಯ ವಿಪತ್ತುಗಳಿಗೆ ಕಾರಣವಾಗಬಹುದು. ಇದನ್ನು ಹೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅವರು ಇಸ್ರೇಲ್ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರು.
ನಿಮ್ಮ ಹೇಳಿಕೆಯು ಇಸ್ರೇಲ್‌ನ ಸಂಪೂರ್ಣ ನಾಶವನ್ನು ಸೂಚಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದಾಗ, ಹೌದು. ನಾವು ಇಸ್ರೇಲ್‌ಗೆ ತಕ್ಕ ಪಾಠ ಕಲಿಸಬೇಕು. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹಮಾಸ್ ಸದಸ್ಯರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಾವು ಬೆಲೆ ತೆರಲು ಸಿದ್ಧರಿದ್ದೇವೆ. ಅಷ್ಟೇ ಅಲ್ಲ ಅದನ್ನು ವಾಪಸ್ ಪಡೆಯುತ್ತೇವೆ. ನಮ್ಮನ್ನು ಹುತಾತ್ಮರ ರಾಷ್ಟ್ರ ಎನ್ನುತ್ತಾರೆ. ತ್ಯಾಗಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದರು.