ಇಸ್ರೇಲ್‌ನ ಅಸ್ತಿತ್ವಕ್ಕೆ ಹೋರಾಟ: ಬೆಂಜಮಿನ್

ಟೆಲ್ ಅವೀವಾ,ಅ.೨೯- ಹಮಾಸ್ ಬಂಡುಕೋರರ ವಿರುದ್ದದ ಯುದ್ಧ ,ಇಸ್ರೇಲ್‌ನ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದಿಲ್ಲಿ ಹೇಳಿದ್ದಾರೆಇಸ್ರೇಲ್‌ನ ಅಸ್ವಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಮುಂದುವರಿಯಲಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ಯುದ್ದದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸುರಂಗಗಳು ಇಸ್ರೇಲಿ ನೆಲದ ಆಕ್ರಮಣಕ್ಕೆ ಅಪಾಯ ಹೆಚ್ಚಿಸುತ್ತಿವೆ. ಹೀಗಾಗಿ ಹದ್ದಿನ ಕಣ್ಣು ಇಡಲಾಗುವುದು ಎಂದು ಅವರು ಹೇಳಿದ್ದಾರೆಗಾಜಾ ಪಟ್ಟಿಯಲ್ಲಿ ಇಸ್ರೇಲ್ ನೆಲದ ಆಕ್ರಮಣ ಹಮಾಸ್‌ನೊಂದಿಗಿನ ಅತ್ಯಂತ ವಿನಾಶಕಾರಿ ಯುದ್ಧವಾಗಿ ಬಿಂಬಿತವಾಗಿದೆ. ಸೇನಾ ಪಡೆಗಳಿಗೆ ಸರ್ವ ರೀತಿಯಲ್ಲಿ ಸಜ್ಜಾಗಿರುವಂತೆ ಹಾಗು ಇಸ್ರೇಲ್ ಅಸ್ವಿತ್ವ ಕಾಪಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರ.ಹಮಾಸ್ ಉಗ್ರಗಾಮಿ ಗುಂಪು ಜನನಿಬಿಡ ಪ್ರದೇಶದಲ್ಲಿ ಹರಡಿಕೊಂಡಿದೆ, ಹೋರಾಟಗಾರರು, ಅವರ ರಾಕೆಟ್ ಶಸ್ತ್ರಾಗಾರ ಮತ್ತು ೨೦೦ ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದು ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ಇಸ್ರೇಲ್ ಸೇನೆ ಮತ್ತು ಹಮಾಸ್ ಬಂಡುಕೋರರ ನಡುವೆ ಅಕ್ಟೋಬರ್ ೭ ರಂದು ಆರಂಭವಾದ ದಾಳಿ ಮುಂದುವರಿದಿದೆ. ಗಾಜಾ ಪಟ್ಟಿ ಸೇರಿದಂತೆ ಇಸ್ರೇಲ್‌ನಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

ಇಂಟರ್ ನೆಟ್ ಮರು ಸ್ಥಾಪನೆ:

ಗಾಜಾದ ಮೇಲೆ ಇಸ್ರೇಲ್‌ನ ಭಾರೀ ಬಾಂಬ್ ದಾಳಿಯಿಂದ ಅಸ್ತವ್ಯಸ್ತಗೊಂಡ ಇಂಟರ್ನೆಟ್ ಮತ್ತು ಫೊ?ನ್ ಸಂಪರ್ಕವನ್ನು ಇಂದು ಅನೇಕ ಜನರಿಗೆ ಪುನಃಸ್ಥಾಪಿಸಲಾಯಿತು,ಇಸ್ರೇಲ್ ಸೇನೆ ಭೂಮಿ, ಗಾಳಿ ಮತ್ತು ಸಮುದ್ರ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ದಾಳಿ ಮುಂದುವರಿಸಿದ್ದು ಹಮಾಸ್ ಬಂಡುಕೋರರಿಗೆ ಎಡೆ ಮುರಿ ಕಟ್ಟಲುಎಲ್ಲಾ ಪ್ರಯತ್ನ ನಡೆಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.