
ಜೆರುಸಲೇಂ, ಮೇ ೧೦- ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಜಿಹಾದ್‌ನ ಮೂವರು ಕಮಾಂಡರ್‌ಗಳು ಸೇರಿದಂತೆ ಕನಿಷ್ಠ ೧೫ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ೨೨ ಮಂದಿ ಗಾಯಗೊಂಡಿದ್ದು, ಹೆಚ್ಚಿನವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ದಾಳಿಯಲ್ಲಿ ಮೂವರು ಮಕ್ಕಳು, ಮೂವರು ಪ್ಯಾಲೆಸ್ತೀನ್ ಸಶಸ್ತ್ರ ಹೋರಾಟಗಾರರ ಸಹಿತ ೧೫ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತಪಟ್ಟವರಲ್ಲಿ ಎಂಟು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಮತ್ತು ಹಲವಾರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ೨೨ ಮಂದಿ ಗಾಯಗೊಂಡಿದ್ದಾರೆ.

ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕರು ಇಸ್ರೇಲಿ ನಾಗರಿಕರ ಮೇಲಿನ ಇತ್ತೀಚಿನ ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇನ್ನು ಇಸ್ರೇಲ್ ದಾಳಿಗೆ ಪ್ರತಿದಾಳಿ ನಡೆಸಲು ಇಸ್ಲಾಮಿಕ್ ಜಿಹಾದ್ ಸಂಘಟನೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಾಳಿಗೆ ತಡೆಯೊಡ್ಡಲು ಇಸ್ರೇಲ್ ಕೂಡ ತನ್ನ ಭದ್ರತಾ ಅಧಿಕಾರಿಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಿದೆ. ‘ಬಾಣ ಮತ್ತು ಗುರಾಣಿ’ ಎಂಬ ಹೆಸರಿನ ಕಾರ್ಯಾಚರಣೆ ಆರಂಭವಾಗಿದ್ದು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮೂವರು ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಗಾಝಾದ ಕಡೆಯಿಂದ ಇಸ್ರೇಲ್ ಪ್ರದೇಶದತ್ತ ನಡೆದಿರುವ ಹಲವು ದಾಳಿಗೆ ಇದು ಉತ್ತರವಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಭಯೋತ್ಪಾದಕ ದಾಳಿಯಿಂದ ಇಸ್ರೇಲ್ ನಾಗರಿಕರನ್ನು ರಕ್ಷಿಸಲು ಈ ಕಾರ್ಯಾಚರಣೆ ಅತ್ಯಗತ್ಯವಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಈ ಮಧ್ಯೆ, ಗಾಝಾದ ೨ ಗಡಿದಾಟು(ಬೋರ್ಡರ್ ಕ್ರಾಸಿಂಗ್)ಗಳನ್ನು ಮುಂದಿನ ಸೂಚನೆಯವರೆಗೆ ಮುಚ್ಚಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ. ಇನ್ನು ಕಳೆದ ಆಗಸ್ಟ್‌ನಲ್ಲಿ ಇಸ್ರೇಲ್ ಮತ್ತು ಇಸ್ಲಾಮಿಕ್ ಜಿಹಾದ್ ನಡುವಿನ ಮೂರು ದಿನಗಳ ಹಗೆತನದ ನಂತರ ಸದ್ಯ ಆರಂಭವಾದ ದಾಳಿಗಳು ಮಾರಣಾಂತಿಕವಾಗಿವೆ. ಆಗಸ್ಟ್‌ನಲ್ಲಿ ನಡೆದ ದಾಳಿಯಲ್ಲಿ ಗಾಜಾದಲ್ಲಿ ೪೯ ಪ್ಯಾಲೆಸ್ಟೀನಿಯಾದವರು ಹತ್ಯೆಗೀಡಾಗಿದ್ದರು. ಮಂಗಳವಾರ ಮುಂಜಾನೆ ಇಸ್ರೇಲಿ ದಾಳಿಗಳು ಪ್ರಾರಂಭವಾಗಿದ್ದು, ೪೦ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಗಾಜಾದಾದ್ಯಂತ ಸರಣಿ ದಾಳಿ ಮಾಡಿವೆ. ಈ ದಾಳಿಯಲ್ಲಿ ಹಲವು ಮನೆಗಳಿಗೆ ಕೂಡ ಹಾನಿಯಾಗಿದೆ. ಈ ಪೈಕಿ ಎರಡು ಅಪಾರ್ಟ್‌ಮೆಂಟ್‌ಗಳ ಮುಂದಿನ ಭಾಗ ಸಂಪೂರ್ಣ ಹಾನಿಗೀಡಾಗಿದೆ.