ಇಸ್ಮಾಯಿಲ್ ಖಾದ್ರಿ ದರ್ಗಾದ ಮಹಿಮೆ ಅಪಾರ

ಹುಮನಾಬಾದ :ಆ.1:ಘೋಡವಾಡಿ ಹಜರತ್ ಸೈಯದ್ ಇಸ್ಮಾಯಿಲ್ ಖಾದ್ರಿ ದರ್ಗಾದ ಮಹಿಮೆ ಅಪಾರವಾಗಿದೆ . ಭಕ್ತಾದಿಗಳು ಈ ದರ್ಗಾಕ್ಕೆ ಬಂದು ದರ್ಶನ ಪಡೆಯುತ್ತಾರೆ . ಈ ದರ್ಗಾದ ಪುರಾತನ ಪವಿತ್ರ ಕೆರೆ ಕೂಡ ಜಿರ್ಣೋದ್ಧಾರ ಅಂತಾರಾಜ್ಯ ಮಾಡಲಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು . ತಾಲ್ಲೂಕಿನ ಘೋಡವಾಡಿ ಗ್ರಾಮದಲ್ಲಿ ಆಯೋಜಿಸಿದ ಹಜರತ್ ಸೈಯದ್ ಇಸ್ಮಾಯಿಲ್ ಖಾದ್ರಿ ಅವರ 561 ನೇ ಉರುಸ್‍ನಲ್ಲಿ ಪಾಲ್ಗೊಂಡು ಮಾತನಾಡಿ ಈ ದರ್ಗಾದ ಅಭಿವೃದ್ಧಿಗೆ ಹಲವಾರು ಯೋಜನೆಗಳು ಹಾಕಿಕೊಂಡು ಮಾದರಿದರ್ಗಾವನ್ನಾಗಿ ಮಾಡುವುದೆನನ್ನ ಗುರಿಯಾಗಿದೆ ಎಂದರು . ಅಧ್ಯಕ್ಷ ಹೈದರಾಬಾದ್‍ನ ಅನ್ವರ್ ಉಲ್ಲಾ ಹುಷೇನಿ ಸಾಹೇಬ್ ದಿವ್ಯ ಸಾನಿಧ್ಯ ವಹಿಸಿದ್ದರು . ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪರ್ ಮಿಯಾ , ಗ್ರಾಮ ಪಂಚಾಯತ್ ಸಲಾವೋದ್ದಿನ್ ಪಾಪು , ಖಲೀಲ್ ಅಡ್ವಕೇಟ್ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದತ್ತು ಕಾಳೆ , ಜ್ಞಾನೇಶ್ವರ ಭೋಸೆ , ಬಂಡೆಪ್ಪ ಗುಳಶೆಟ್ಟಿ , ಶಾಂತು ವಡಗೆರಿ , ರಾಹುಸಾಬ , ಮಹೇಶ್ ತೆಲಂಗ , ಸಿರಾಜ್ ಪಾಷಾ , ಸಿದ್ದಾರ್ಥ ಡಾಂಗೆ , ರವಿ ಎಕಲೂರೆ , ತಾನಾಜಿ ಜಮಾದಾರ , ಸೈಯದ್ ಸಾದಕ್ಷ , ಸೈಯದ್ ಬಿಲಾಲ್ ಉಪಸ್ಥಿತರಿದ್ದರು .