ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಬೀಳಲಿ

ಲಿಂಗಸೂಗೂರು.ನ.೨೧-ಹಳ್ಳಿಗಳ ಅಗಸಿಗಳು, ಹೊಲ-ಗದ್ದೆಗಳು, ಗುಡ್ಡಗಾಡು ಪ್ರದೇಶಗಳು, ದೇವಸ್ಥಾನದ ಬಯಲು ಮತ್ತು ಶಾಲಾ ಕೊಠಡಿಗಳೆ ಜೂಜುಕೋರರ ಅಡ್ಡೆಗಳಾಗಿವೆ. ದಿನದಲ್ಲಿ ಶಾಲೆ ನಡೆದರೆ ಸಂಜೆಯಾಗುತ್ತಲೆ ಇಸ್ಪಿಟ್ ಕ್ಲಬ್‌ಗಳಾಗಿದು, ಹಟ್ಟಿ ಭಾಗದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ರಾಜಾರೋಷವಾಗಿ ನಡೆದಿರುವ ಇಸ್ಪಿಟ್ ಆಟಕ್ಕೆ ನಿಯಂತ್ರಣ ಮಾಡುವವರೆ ಇಲ್ಲದಮಥಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ: ಚಿಕ್ಕಹೆಸರೂರು ಗ್ರಾಮದಲ್ಲಿ, ಹಟ್ಟಿ-ರಾಯಚೂರು ಹಾಗೂ ಲಿಂಗಸುಗೂರು-ರಾಯಚೂರು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳಲ್ಲಿ ಗುರುಗುಂಟಾ, ಕೋಠಾ, ಗೌಡೂರು, ಗೆಜ್ಜಲಗಟ್ಟಾ, ರೋಡಲಬಂಡಾ, ಪೈದೊಡ್ಡಿ, ಆನ್ವರಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿ-ದೊಡ್ಡಿಗಳಲ್ಲಿ ನಿತ್ಯದ ಕಸುಬಿನಂತೆ ನಡದಿದೆ. ಇಸ್ಪಿಟ್ ಜೂಜಾಟ.
ಹಳ್ಳಿಗಳ ಅಗಸಿಗಳು, ಹೊಲ-ಗದ್ದೆಗಳು, ಗುಡ್ಡಗಾಡು ಪ್ರದೇಶಗಳು, ದೇವಸ್ಥಾನದ ಬಯಲು, ಶಾಲಾ ಕೊಠಡಿಗಳೆ ಜೂಜುಕೋರರ ಅಡ್ಡೆಗಳಾಗಿವೆ. ದಿನದಲ್ಲಿ ಶಾಲೆ ನಡೆದರೆ, ಸಂಜೆಯಾಗುತ್ತಲೆ ಇಸ್ಪಿಟ್ ಕ್ಲಬ್‌ಗಳಾಗಿ-ಮಿನಿ ಬಾರ್‌ಶಾಪ್‌ಗಳಾಗಿ ಬದಲಾವಣೆಯಾಗುತ್ತಿವೆ.
ಜೂಜು ನಡೆದಿರುವುದು ಸಂಭಂಧಪಟ್ಟವರಿಗೆ ಗೊತ್ತಿದ್ದರು ಕೂಡಾ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು, ರೈತರನ್ನು ಜೂಜಿಗೆ ದೂಡಲಾಗುತ್ತಿದೆ. ಜೂಜು ದಂಧೆಯಿಂದ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಕೂಡಲೆ ನಿಯಂತ್ರಿಸಲು ಅಗತ್ಯಕ್ರಮಕೈಗೊಳ್ಳಬೇಕೆಂದು ವಾಸುದೇವನಾಯಕ್, ಅಮರೇಶ್‌ನಾಯಕ್ ದೊರೆ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಟ್ಟಿ ಭಾಗದಲ್ಲಿ ನಡೆಯುತ್ತಿರುವ ಮಟ್ಕಾ-ಇಸ್ಪಿಟ್ ಜೂಜಾಟ ಗಮನಕ್ಕಿದ್ದು, ನಿಯಂತ್ರಿಸಲು ಸಧ್ಯದಲ್ಲಿಯೆ ಒಂದು ತಂಡ ರಚಿಸಿ, ಜೂಜು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಇತ್ತಿಚ್ಛೇಗೆ ಹಟ್ಟಿ ಠಾಣೆಗೆ ಭೇಟಿ ನೀಡಿದ್ದ ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.