ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ ಬಂದನ

ಸಿಂಧನೂರು,ಆ.೨೩-
ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ನಗದು ಹಣದ ಜೊತೆಗೆ ಬೈಕ್‌ಗಳ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಾಲೂಕಿನ ಶಾಂತಿನಗರ ಹತ್ತಿರ ಚೆನ್ನಳ್ಳಿ ಸೀಮಾದ ಹಳ್ಳದ ಹತ್ತಿರ ಇರುವ ಜಮೀನಿನಲ್ಲಿ ಲಂಕೇಶ ನಾಯಕ ಬೂದುಗುಪ್ಪ, ಮಂಜುನಾಥ ಕಾರಟಗಿ, ಹನುಮಂತ ಹಂಚಿನಾಳ ಕ್ಯಾಂಪ್ ಇವರು ಅಕ್ರಮವಾಗಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದರು ಎನ್ನಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಭರತ ಪ್ರಕಾಶ, ಎಎಸ್‌ಐ ದೌವಲತ್ ಖುರೇಶ, ಪಿಸಿಗಳಾದ ಗೋಪಾಲ, ಬಸವರಾಜ, ರವಿ ರಾಠೋಡ, ಅಮರೇಶ, ಪ್ರದೀಪ, ಈ ಸಿಬ್ಬಂದಿಗಳ ನೇತೃತ್ವದಲ್ಲಿ ನಿನ್ನೆ ಸಂಜೆ ೫ ಗಂಟೆಗೆ ದಾಳಿ ಮಾಡಿ ೧೧ ಬೈಕ್‌ಗಳು, ೩೯ ಸಾವಿರ ನಗದು ಹಣದ ಜೊತೆಗೆ ೩ ಜನ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರು ಪೊಲೀಸರನ್ನು ಕಂಡು ಓಡಿ ಹೋಗಿದ್ದಾರೆ.
ಸುಮಾರು ೧೬ ಜನರ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಗೆ ನೂತನವಾಗಿ ಬಂದ ಪಿಎಸ್‌ಐ ಭರತ ಪ್ರಕಾಶ ಇವರ ಮೊದಲನೆ ದಾಳಿ ಪ್ರಕರಣವಾಗಿದೆ.