ಇಸ್ಪೀಟ್ ಅಡ್ಡೆ ಮೇಲೆ ದಾಳಿ. 10 ಆರೋಪಿಗಳ ಬಂಧನ, 13ಬೈಕುಗಳ  ವಶ .


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 10 :- ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ 10 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 61, 700ರೂ ನಗದು ಹಣ ಸೇರಿದಂತೆ 13 ಬೈಕುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಗಡಿಭಾಗವಾದ ಕಲ್ಲಹಳ್ಳಿ ಸಮೀಪದಲ್ಲಿ ಶನಿವಾರ ಸಂಜೆ ಜರುಗಿದ್ದು ಭಾನುವಾರ ಸಂಜೆ ಪ್ರಕರಣ ದಾಖಲಾಗಿದೆ.
ಹೊನ್ನೂರುಸ್ವಾಮಿ ಹಾಗೂ ಇತರೆ 9ಜನ ಸೇರಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಕೆಂಚಮಲ್ಲನಹಳ್ಳಿ ರಸ್ತೆಯ ಹಳ್ಳದಲ್ಲಿ ಶನಿವಾರ ಸಂಜೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ ಹಾಗೂ ಸಿಬ್ಬಂದಿ ದಾಳಿ ನಡೆಸಲಾಗಿ 10ಜನರನ್ನು ಬಂಧಿಸಿ, ಅವರ ಬಳಿ ಇದ್ದ 61, 700ರೂ ನಗದು ಹಣ ಹಾಗೂ ಅವರು ತಂದಿದ್ದ 13ಬೈಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ಸಂಜೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.