ಇಸ್ಪೀಟ್ ಅಡ್ಡೆ ಮೇಲೆ ದಾಳಿ, ೧೯ ಬೈಕ್, ೭೨ ಸಾವಿರ ವಶ

ಮಾನ್ವಿ,ಜೂ.೨೬-
ತಾಲೂಕಿನ ಜಾನೇಕಲ್ ಗ್ರಾಮದ ಗುಡ್ಡದಲ್ಲಿ ಕಳೆದ ಹಲವಾರು ದಿನಗಳಿಂದ ಇಸ್ಪೀಟು ಆಟ ನಡೆಯುತ್ತಿದೆ ಎನ್ನುವ ಮಾಹಿತಿಯೊಂದಿಗೆ ಭಾನುವಾರ ಮಧ್ಯಾನ್ಹ ಸಮಯದಲ್ಲಿ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ರಾಯಚೂರು ಡಿಸಿಆರ್‌ಬಿ ಅಧಿಕಾರಿ ತಿಮ್ಮಣ್ಣ ಇವರ ನೇತೃತ್ವದಲ್ಲಿ ತಾಲೂಕಿನ ಪಿಐ ವೀರಭದ್ರಯ್ಯ ಸ್ವಾಮಿ ಹಿರೇಮಠ ಸಹಕಾರದೊಂದಿಗೆ ಜಾನೇಕಲ್ ಗುಡ್ಡದಲ್ಲಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ದಾಳಿ ಮಾಡಲಾಗಿದ್ದು ೧೯ ದ್ವಿಚಕ್ರ ವಾಹನಗಳು ಹಾಗೂ ೭೨ ಸಾವಿರ ನಗದು ಹಣದೊಂದಿಗೆ ಒಟ್ಟು ೦೪ ಜನ ಆರೋಪಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದ್ದು ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ ಈ ಕಾರ್ಯಾಚರಣೆಯಲ್ಲಿ ರಾಯಚೂರು ಡಿಸಿಆರ್‌ಬಿ ಸಿಬ್ಬಂದಿಗಳು ಹಾಗೂ ಮಾನ್ವಿ ಪೋಲಿಸ್ ಸಿಬ್ಬಂದಿಗಳು ಇದ್ದರು.