ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರ ದಾಳಿ

ಹಗರಿಬೊಮ್ಮನಹಳ್ಳಿ.ನ.೧೭ ದೀಪಾವಳಿ ಹಬ್ಬದ ಪ್ರಯುಕ್ತ ಇಸ್ಪೀಟ್ ಆಡುವವರ ಮೇಲೆ ಪೊಲೀಸರು ದಾಳಿ ಮಾಡಿ ಅವರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪಿಎಸ್ಐ ವೈಷ್ಣವಿ ತಿಳಿಸಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ಹಲವು ಹಳ್ಳಿಗಳಲ್ಲಿ ಇಸ್ಪೀಟ್ ಆಡುತ್ತಿದ್ದ ಗುಂಪುಗಳ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕೇಸ್ ದಾಖಲಿಸುವ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಪೊಲೀಸ್ ಠಾಣೆಯಿಂದ ಇಸ್ಟೇಟ್ ಆಡು ಕೂಡದು ಎಂದು ಮೈಕಲ್ಲಿ ಅನೌನ್ಸ್ ಮಾಡಲಾಗಿತ್ತು .ಒಂದು ವೇಳೆ ಇಸ್ಪೀಟ್ ಆಡುವರು ಕಂಡುಬಂದರೆ ಜಪ್ತಿಮಾಡಿ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು .ಇದನ್ನು ಲೆಕ್ಕಿಸದೆ ಹಬ್ಬದ ಗುಂಗಿನಲ್ಲಿ ಇಸ್ಪೀಟ್ ಆಡುತ್ತಿದ್ದರು. ಪಿಎಸ್ಐ ಹಾಗೂ ಸಿಪಿಐ 11 ಕಡೆ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಪಿಎಸ್ಐ ವೈಷ್ಣವಿ ಮೇಡಂ ಸಿಪಿಐ ಮಲ್ಲಿಕಾರ್ಜುನ್ ಡೊಪ್ಪಿನ್ ಇದ್ದರು.