ಇಸ್ಪೀಟು ಆಡುವವರನ್ನು ತಪ್ಪಿಸಲು ಹೋಗಿ ಕಾಲು ಮುರಿದುಕೊಂಡ

ಬಳ್ಳಾರಿ ನ. 16 : ಕಟ್ಟಡವೊಂದರಲ್ಲಿ ಇಸ್ಪೀಟು ಆಡುತ್ತಿದ್ದವರನ್ನು ಪೆÇಲೀಸರಿಂದ ತಪ್ಪಿಸಲು ಪ್ರಯತ್ನಿಸಿದ ಇಲ್ಲಿನ ವೆಂಕಟೇಶ್ವರ ನಗರ ದ ಬಿಜೆಪಿ ಕಾರ್ಯಕರ್ತ ಪೋಲೀಸರಿಂದ ದೂಕಿಸಿಕೊಂಡು ಕಾಲು ಮುರಿದುಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿ.
ಇಲ್ಲಿನ ವೆಂಕಟೇಶ್ವರ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲವರು ದೀಪವಾಳಿ ಹಬ್ಬದ ಹಿನ್ನಲೆಯಲ್ಲಿ ಇಸ್ಪೀಟು ಆಡುತ್ತಿದ್ದರು. ದೂರದಲ್ಲಿ ಬರುತ್ತಿದ್ದ ಪೆÇಲೀಸರನ್ನು ನೋಡಿದ ಶಿವು ಇಸ್ಪೀಟ್ ಆಡುವವರಿಗೆ ಓಡಿ ಹೋಗುವಂತೆ ಹೇಳಲು ಮೇಲೆ ಹೋಗಿದ್ದಾರೆ.ಅಷ್ಟರಲ್ಲಿ ಅಲ್ಲಿಗೆ ಬಂದ ಗಾಂಧಿನಗರ ಠಾಣೆಯ ಪೆÇಲೀಸ್ ಸಿಬ್ಬಂದಿ ಶಿವುನನ್ನು ಹಿಡಿದು ಇಸ್ಪೀಟು ಆಡುವವರನ್ನು ತಪ್ಪಿಸಿದ್ದಕ್ಕೆ ಕೋಪಗೊಂಡು ಕಟ್ಟಡದಿಂದ ತಳ್ಳಿದ್ದಾರೆ. ಆಗ ಆತ ಕೆಳಕ್ಕೆ ಬಿದ್ದು ಕಾಲು ಮುರಿದಿದೆ. ಸಧ್ಯ ಶಿವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಮಧ್ಯೆ ನಗರ ಗಾಲಿ ಶಾಸಕ ಸೋಮಶೇಖರ ರೆಡ್ಡಿ ಘಟನೆಗೆ ಕಾರಣರಾದ ಪೆÇಲೀಸ್ ಸಿಬ್ಬಂದಿ ಅಮಾನತು ಮಾಡಲು ಆಗ್ರಹಿಸಿದ್ದು. ಘಟನೆಯನ್ನು ಸರಿಪಡಿಸಲು ಗಾಂಧೀನಗರ ಠಾಣೆಯ ಅಧಿಕಾರಿಗಳು ಸಂಧಾನ ಮಾತುಕತೆ ನಡೆಸಿದ್ದಾರಂತೆ.