ಇಸ್ಕಾನ್ ನಲ್ಲಿ ಕಾರ್ತಿಕ ಮಹೋತ್ಸವ


ದಾವಣಗೆರೆ.ನ.೧೫; ನಗರದ ಇಸ್ಕಾನ್ ದೇವಾಸ್ಥಾನ ಸಭಾಂಗಣದಲ್ಲಿ ಕಾರ್ತಿಕ ಮಾಸದ ಅಂಗವಾಗಿ, ಶ್ರೀ ದಾಮೋದರ ಆರತಿ ಹಾಗು ಬಾಳೆ ದಿಂಡಿನ ಅಲಂಕಾರದೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದರ ಮೂಲಕ ಕಾರ್ತಿಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇಸ್ಕಾನ್ ಮುಖ್ಯಸ್ಥರಾದ  ಅವಧೂತ ಚಂದ್ರ ದಾಸ ಅವರು ಪೂಜಾ ಕಾರ್ಯಗಳನ್ನು ನೆಡೆಸಿಕೊಟ್ಟರು. ನಂತರ ಅವರು ಎಲ್ಲಾ ಭಕ್ತರನ್ನು ಉದ್ದೇಶಿಸಿ ಆಶಿರ್ವಚನ ನೀಡುತ್ತಾ ನಾವೆಲ್ಲಾ ಜ್ನಾನದ ದಿವಟಿಗೆಯಿಂದ ನಮ್ಮ ಜೀವನವನ್ನು ಬೆಳಗಿಸಕೊಳ್ಳಬೇಕೆಂದು, ಮತ್ತು ಭಗವದ್ಗೀತೆ ಯಥಾರೂಪ ಗ್ರಂಥದ ಆಧಾರದ ಮೇಲೆ  ಭಗವಂತ ಶ್ರೀ ಕೃಷ್ಣನು ಯಾರು ಅವನನ್ನು ಅನನ್ಯವಾಗಿ ಪ್ರೀತಿಪೂರ್ವಕವಾಗಿ ಭಜಿಸುವರೋ ನಾನು ಅಂಥ ಭಕ್ತರ ಹೃದಯದಲ್ಲಿ  ಪ್ರಕಾಶಮಾನವಾದ  ಜ್ನಾನ ದೀಪವನ್ನು ಬೇಳಗಿಸಿ, ಅಜ್ನಾನದ ಅಂದಕಾರವನ್ನು ಹೋಗಲಾಡಿಸುತ್ತೇನೆ  ಎಂದು ಹೇಳಿದರು.