ಇಷ್ವವಾಗದಿದ್ದರೆ ಹಣ ವಾಪಸ್ ; ನಿರ್ಮಾಪಕರ ಘೋಷಣೆ

•             ಚಿ.ಗೋ ರಮೇಶ್

ಮತದಾನದ ಬಗ್ಗೆ ಜಾಗೃತಿ ಮೂಡಿಸುವ  “ಪ್ರಭುತ್ವ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆರ್.ರಂಗನಾಥ್ ಆಕ್ಷನ್‍ಕಟ್ ಹೇಳಿರುವ ಚಿತ್ರಕ್ಕೆ ರವಿರಾಜ್ ಎಸ್ ಕುಮಾರ್, ಮತ್ತು ಮೇಘಡಹಳ್ಳಿ ಶಿವಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಕಥೆ ಬರೆದು ಬಂಡವಾಳ ಹಾಕಿರುವ ಮೇಘಡಹಳ್ಳಿ ಶಿವಕುಮಾರ್, ಮತದಾನದ ಮಹತ್ವ ಸಾರುವ ಚಿತ್ರ ಪ್ರಭುತ್ವ . ಚಿತ್ರ ಇಷ್ಟವಾಗದಿದ್ದರೆ ಪ್ರೇಕ್ಷಕನಿಗೆ ಹಣ ವಾಪಸ್ ಮಾಡುವೆ. ಆದರೆ ಅವರ ಸಮಯ ಕೊಡಲು ಆಗುವುದಿಲ್ಲ.ಅದಕ್ಕಾಗಿ ಕ್ಷಮೆ ಕೋರುವೆ ಎಂದರು.

ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ.ನಿರ್ದೇಶಕರಿಗೆ ಯಾವೆಲ್ಲಾ ಕಲಾವಿದರನ್ನು ಹಾಕಿಕೊಳ್ಳಬೇಕು ಎನ್ನುವ ಆಸೆ ಇತ್ತೋ ಅದನ್ನು ಚಿತ್ರದಲ್ಲಿ ಪೂರೈಸಿಕೊಂಡಿದ್ದಾರೆ. ಹೀಗಾಗಿ ಚಿತ್ರದ ಬಜೆಟ್ ಕೂಡ ಹೆಚ್ಚಾಗಿದೆ. ಪಕ್ಕಾ ಯೋಜನೆ ಇದ್ದಾಗ ಕೆಲಸ ಸುಲಭವಾಗಲಿದೆ. ಒಂದಷ್ಟು ಯೋಜನೆ ಇಲ್ಲದಿರುವುದು, ಕೊರೊನಾ ಬಂತು ಹೀಗಾಗಿ ಚಿತ್ರ ವಿಳಂಬವಾಯಿತು.

ಚಿತ್ರ ತಂತ್ರಜ್ಞರ ಸಿನಿಮಾ, ಜೊತೆಗೆ ಚಿತ್ರದಲ್ಲಿ  ವಿನಯ್  ಸಂಭಾಷಣೆ ಚಿತ್ರದ ಮೌಲ್ಯ ಹೆಚ್ಚುವಂತೆ ಮಾಡಿದೆ. ಚಿತ್ರದ ಶೀರ್ಷಿಕೆ ನೋಡಿ, ವಿವಾದವಾಗಬಹುದು ಅಂತ ನಿರ್ದೇಶಕರು ಹೇಳಿದರು. ನಾವು ವಿವಾದ ಮಾಡಲು ಬಂದಿಲ್ಲ‌ ಮತದಾನದ ಬಗ್ಗೆ ಮೂಡಿಸಲು ಏನೇ ವಿವಾದ ಬಂದರೂ ಎದುರಿಸಲು ಸಿದ್ದ ಎಂದೆ. ಜೊತೆಗೆ ಅವರೂ ಕೂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದರಿಂದ ಚಿತ್ರ ನಿರ್ದೇಶನ ಮಾಡಲು ಅವಕಾಶ ಕೊಟ್ಟೆ. ಮದ್ಯದಲ್ಲಿ ಒಂದಷ್ಟು ಸಮಸ್ಯೆಯಾಯಿತು ಎಲ್ಲವನ್ನು ದಾಟಿಕೊಂಡು ಅತ್ಯುತ್ತಮ‌ಚಿತ್ರ ಮಾಡಿದ್ದೇವೆ.ಮುಂದಿನ ತಿಂಗಳು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ನಿರ್ದೇಶಕ ರಂಗನಾಥ್, ಮಾತನಾಡಿ ಪ್ರಭುತ್ವ ಸತ್ತು ಹೋಗಿದೆ, ಮತ ಮಾರಿಕೊಳ್ಳಬೇಡಿ ಎನ್ನುವ ಕುರಿತು ಜಾಗೃತಿ ಮೂಡಿಸುವ ಸಿನಿಮಾ. ನಾಯಕ ಚೇತನ್ ಚಂದ್ರ ಅವರಿಗೆ ಚಿತ್ರದ ಮೂಲಕ ಹೆಸರು ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ  ಚೇತನ್ ಚಂದ್ರ, ನಿರ್ಮಾಪಕರು ಉಳಿಯಬೇಕು. ಆಗ ಇನ್ನಷ್ಟು ಚಿತ್ರ ಮಾಡಲು ಸಹಕಾರಿಯಾಗಲಿದೆ.ಒಳ್ಳೆಯ ಪಾತ್ರ ಸಿಕ್ಕಿದೆ . ಇಲ್ಲಿಯವರೆಗೆ ಒಂದು ಲೆಕ್ಕ ಇನ್ಮೇಲೆ ಇನ್ನೊಂದು ಲೆಕ್ಕ ಎಂದು ಮಾಹಿತಿ ಹೇಳಿಕೊಂಡರೆ ನಾಯಕಿ ಪಾವನ ಗೌಡ, ಮಾತನಾಡಿ 100  ದಿನ ಚಿತ್ರೀಕರಣ ಮಾಡಲಾಗಿದೆ. ಪರಿಸರ ಪ್ರೇಮಿ ಪಾತ್ರ, ಡಿ ಗ್ಲಾಮ್ ಪಾತ್ರದ  ನಡುವೆ ವಿಶೇಷವಾದ ಪಾತ್ರ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.

ಹಿರಿಯ ಕಲಾವಿದರಾದ  ಅರವಿಂದ ರಾವ್,ಹರೀಶ್ ರೈ ಆದಿ ಲೋಕೇಶ್ , ವಿಜಯ್ ಚೆಂಡೂರ್, ಅನಿತಾ ಭಟ್ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಿನಿಮಾ ಪ್ರೇಮಿ

ಚಿಕ್ಕ ಹುಡುಗನಿಂದ ಸಿನಿಮಾ ಪ್ರೇಮಿ.ಸತ್ತವರ ಮೇಲೆ ಎರಚುತ್ತಿದ್ದ ಕಾಸು ಬಾಚಿಕೊಂಡು ಸಿನಿಮಾ ನೋಡಿದ್ದೇನೆ. ದೇವರು ಕಣ್ಣು ಬಿಟ್ಟಮೇಲೆ ಸಿನಿಮಾ ಮಾಡುವ ಎನ್ನುವ ಕನಸಿನಿಂದ ಚಿತ್ರ ಮಾಡಿದ್ದೇನೆ. ಎಲ್ಲರ ಸಹಕಾರ ಬೆಂಬಲವಿರಲಿ ಎಂದು ಕೇಳಿಕೊಂಡರು  ಶಿವಕುಮಾರ್ ಮೇಘಡಹಳ್ಳಿ.