ಇಷ್ಠಲಿಂಗ ಪೂಜೆಯಿಂದ ಇಷ್ಠಾರ್ಥ ಸಿದ್ಧಿ:ದ್ವಿತಿಯ ಸಾಂಭಶಿವಾಚಾರ್ಯರು

ಕಲಬುರಗಿ:ಆ.02: ಇಷ್ಠಲಿಂಗ ಪೂಜೆಯಿಂದ ಇಷ್ಠಾರ್ಥ ಸಿದ್ಧಿ ಪಡೆಯಬಹುದು, ಇಷ್ಠಲಿಂಗ ಪೂಜೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ, ಶಾಂತಿ ಸಮಾಧಾನ ಪ್ರಾಪ್ತವಾಗುತ್ತದೆ ಎಂದು ವಿ.ಕೆ. ಸಲಗರದ ದ್ವಿತಿಯ ಸಾಂಭಶಿವಾಚಾರ್ಯರು ನುಡಿದರು.

ಅವರು ಜೇವರ್ಗಿ ರಸ್ತೆಯಲ್ಲಿರುವ ಕೇಸರಿಬೆಟ್ಟದಲ್ಲಿ 28ನೇ ಶ್ರಾವಣ ತಪೋಅನುಷ್ಠನ ಪೂಜಾ ಸಮಾರಂಭದಲ್ಲಿ ಆರ್ಶೀವಚನಗೈಯುತ್ತ ಮನುಷ್ಯ ಬದುಕಿ ಬಾಳಲು ನೀರು, ಅನ್ನ, ಗಾಳಿ ಎಷ್ಟುಮುಖ್ಯವೋ ಅಷ್ಟೆ ಉತ್ತಮ ವ್ಯಕ್ತಿಯಾಗಿ ಬಾಳಲು ಸಜ್ಜನರ ಒಳ್ಳೆಯ ಮಾತುಗಳು ಮುಖ್ಯ, ಪೂಜೆ ಮತ್ತು ಧ್ಯಾನದ ಮೂಲಕ ದೇವರಿಗೆ ಮನುಷ್ಯ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ನುಡಿದರು. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ತಪೋಅನುಷ್ಠಾನ ರಾಜೋಪಚಾರ ಮಹಾಪೂಜೆ ನೆರವೇರಿಸಲಾಯಿತು. ಸಹಸ್ರಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ಭಕ್ತಾದಿಗಳು ಶ್ರೀಗಳ ದರ್ಶನಾಶೀರ್ವಾದ ಪಡೆದುಕೊಂಡರು.