ಇಷ್ಟಾರ್ಥ ಪೂರೈಸುವ ಶಕ್ತಿ ಶ್ರೀದೇವಿ ಗ್ರಂಥಕ್ಕಿದೆ

ಗಬ್ಬೂರು.ಅ.೨೭- ಸಕಲ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ಶ್ರೀದೇವಿ ಗ್ರಂಥಕ್ಕಿದೆ. ಶ್ರೀದೇವಿ ಗ್ರಂಥವನ್ನು ಪ್ರತಿಯೊಬ್ಬರು ಕಾಯ, ವಾಚ, ಸ್ವಚ್ಛ ಮನಸ್ಸಿನಿಂದ ಪಾರಾಯಣ ಮಾಡಿದವರಿಗೂ ಸಕಲ ಪ್ರಾಪ್ತಿ ಶ್ರೀದೇವಿ ಅನುಗ್ರಹಿಸುತ್ತಾಳೆ ಎಂದು ಮಲದಕಲ್ ಗ್ರಾಮದ ಶ್ರೀ ನಿಜಾನಂದ ಯೋಗಾಶ್ರಮದ ಪೀಠಾಧಿಪತಿ ಶ್ರೀ ಗುರುಬಸವ ರಾಜಗುರುಗಳು ಅವರು ಹೇಳಿದರು.
ಅವರು ಸಮೀಪದ ಮಲದಕಲ್ ಗ್ರಾಮದ ಶ್ರೀ ನಿಜಾನಂದ ಯೋಗಾಶ್ರಮದ ಆವರಣದಲ್ಲಿ ಪ್ರಥಮ ವರ್ಷದ ದಸರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಸತತ ಒಂಭತ್ತು ದಿನಗಳ ಶ್ರೀದೇವಿ ಮಹಾತ್ಮ ಗ್ರಂಥ ಪುರಾಣ ಪ್ರವಚನ ಮುಕ್ತಾಯ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಆಚಾರವಂತರಾಗಿ ಶ್ರೀದೇವಿ ಗ್ರಂಥವನ್ನು ಗುರುವಿನ ಆಜ್ಞೆ ಬಳಿಕ ಪಾರಾಯಣ ಮಾಡಿದವರಿಗೆ ಭೋಗ-ಮೋಕ್ಷಗಳು ಪ್ರಾಪ್ತಿಯಾಗಿ, ಸಂಸಾರದ ತಾಪತ್ರಾಯ ಸಂಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಹೇಳಿದರು.
ಸತತ ಒಂಭತ್ತು ದಿನಗಳ ಕಾಲ ಶ್ರೀದೇವಿ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ, ಹೋಮ, ಹವನ, ಶ್ರೀ ಮಠದ ಭಕ್ತರಿಂದ ದಿನಕ್ಕೊಬ್ಬರಂತೆ ಕುಟುಂಬದವರೊಂದಿಗೆ ಶ್ರೀದೇವಿಗೆ ಮೂರ್ತಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು.
ಸತತ ಒಂಭತ್ತು ದಿನಗಳ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಿದ ಶಿಷ್ಯರಿಗೆ ಹಾಗೂ ವಿವಿಧ ರಾಜಕೀಯ ಮುಖಂಡರಿಗೆ ಮತ್ತು ಗ್ರಾಮದ ಹಿರಿಯ ಮುಖಂಡರಿಗೆ ಶ್ರೀಮಠದ ಪೀಠಾಧಿಪತಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಲದಕಲ್, ಸುಂಕೇಶ್ವರಹಾಳ, ಅಮಾರಪೂರು, ಬುದ್ದಿನ್ನಿ, ಕಾಕರಗಲ್, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮತ್ತು ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.