ಇಷ್ಟವಾದ ಆಹಾರ ಸೇವನೆ ಜನರ ಆಯ್ಕೆ

ಕೋಲ್ಕತ್ತಾ,ಮೇ.೧೪- ಭಾರತ ವಿಭಿನ್ನ ಭಾಷೆ, ವಿಭಿನ್ನ ಸಂಸ್ಕೃತಿ ಮತ್ತು ವಿಭಿನ್ನ ಉಡುಪು, ಆಚಾರ, ವಿಚಾರ ಹಾಗೆ ಆಹಾರದ ಆಯ್ಕೆಯಲ್ಲಿಯೂ ಕೂಡ, ಯಾರಿಗೆ ಯಾವ ಆಹಾರ ಇಷ್ಟ ಇದೆಯೋ ಅದನ್ನು ಸೇವಿಸುತ್ತಾರೆ ಎಂದು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ

ಮಾಂಸಹಾರ ಇಷ್ಟ ಪಡುವ ಮಂದಿ ಮಾಂಸಹಾರ ಸೇವಿಸುತ್ತಾರೆ. ಸಸ್ಯಹಾರ ಇಷ್ಟ ಪಡುವ ಮಂದಿ ಸಸ್ಯಹಾರ ಸೇವಿಸುತ್ತಾರೆ. ಇದು ಅವರವರ ಆಯ್ಕೆ, ಈ ವಿಷಯ ಅವರ ವಯಕ್ತಿಕ, ಇದನ್ನು ಹಾದಿ ಬೀದಿಯಲ್ಲಿ ತಂದು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ಧಾರೆ.
ಕೆಲವು ಹಿಂದೂಗಳು ಮಾಂಸಾಹಾರಿ ಆಹಾರವನ್ನು ಸೇವಿಸುವುದಿಲ್ಲ ಬದಲಾಗಿ ಮೀನು ತಿನ್ನುತ್ತಾರೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆಯನ್ನು ಟೀಕಿಸಿ ಅದನ್ನು ರಾಜಕೀಯ ಅಸ್ತ್ರ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ

ಪಶ್ಚಿಮ ಬಂಗಾಳದಲ್ಲಿ ಆಹಾರ ಮತ್ತು ಮೀನುಗಳು ಚುನಾವಣಾ ಪ್ರಚಾರದ ಭಾಗವಾಗಿದೆ. ಜನರನ್ನು ಭಾವನಾತ್ಮಕಾಗಿ ಬೇರೆ ಕಡೆ ಸೆಳೆದು ಅವರನ್ನು ದಿಕ್ಕು ತಪ್ಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದ ಗೊತ್ತೋ ಹೊರತು ಅವರಿಗೆ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ಬೇಕಾಗಿಲ್ಲ ಎಂದು ಆರೋಪಿಸಿದ್ದಾರೆ.

ಆಹಾರ ಸಿದ್ದ

ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಮಾದರಿಯ ಆಹಾರ ಸೇವಿಸುತ್ತಾರೋ ಅದನ್ನು ತಯಾರು ಮಾಡಲು ಸಿದ್ದಳಿದ್ದೇನೆ , ನಾನು ಮಾಡಿದ ಆಹಾರವನ್ನು ಅವರು ತಿನ್ನುತ್ತಾರೆಯೇ ಎನ್ನುವುದು ನನಗೆ ಖಾತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಆಹಾರದ ವಿಷಯ ಅವರವರ ಆಯ್ಕೆ, ಅದರಲ್ಲಿ ಇಂತಹುದೇ ಆಹಾರ ತಿನ್ನಿ ಎಂದು ಹೇಳುವುದು ಸರಿಯಲ್ಲ. ದೇಶದವಿವಿಧ ರಾಜ್ಯಗಳಿಂದ ಕೂಡಿದೆ. ಒಂದೊದು ಕಡೆಯೂ ಒಂದೊಂದು ಆಹಾರ ಸಂಸ್ಕೃತಿ ಇದೆ. ಮೀನು, ಮಾಂಸ ಅಥವಾ ಮೊಟ್ಟೆಗಳನ್ನು ತಿನ್ನಬೇಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ

“ಜನರು ತಮಗೆ ಬೇಕಾದುದನ್ನು ತಿನ್ನುತ್ತಾರೆ. ಅದರ ಮೇಲೆ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ಪ್ರಧಾನಿ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.