ಇಶಾನ್ ಅನನ್ಯ ಡೇಟಿಂಗ್

ಮುಂಬೈ ,ಜ.೪- ಬಾಲಿವುಡ್ ಚಿತ್ರರಂಗದ ನಟನಟಿಯರಾದ ಇಶಾನ್ ಖಟ್ಟರ್ ಮತ್ತು ಅನನ್ಯ ಪಾಂಡೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.
ಈ ಸದ್ದಿಗೆ ಪೂರಕವಾಗಿ ನಟ ಇಶಾನ್ ಖಟ್ಟರ್ ಮುತ್ತು ನಟಿ ಅನನ್ಯ ಪಾಂಡೆ ಮಾಲ್ಡಿವ್ಸ್ ಪ್ರವಾಸ ಮುಗಿಸಿ ಜೊತೆಯಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.
ಬಾಲಿವುಡ್‌ನ ಯುವಜೋಡಿಯನ್ನು ಒಟ್ಟಾಗಿ ನೋಡಿದ ಅಭಿಮಾನಿಗಳು ಇಬ್ಬರ ಮಧ್ಯೆ ಏನು ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಇಬ್ಬರ ಮಧ್ಯೆ ಡೇಟಿಂಗ್ ನಡೆಸಲಾಗುತ್ತಿದೆ ಎನ್ನುವ ವದಂತಿ ಹರಡುತ್ತಿದ್ದರು. ಇಶಾನ್ ಖಟ್ಟರ್ ಆಗಲಿ ಅಥವಾ ಅನನ್ಯ ಪಾಂಡೆ ಆಗಲಿ ಗಾಳಿಸುದ್ದಿಗಳು ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಏನು ನಡೆಯುತ್ತಿದೆ ಎನ್ನುವುದು ಖಚಿತವಾಗಿದೆ.
ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಇಶಾನ್ ಖಟ್ಟರ್ ಮತ್ತು ಅನನ್ಯ ಪಾಂಡೆ ಜೊತೆಯಾಗಿಯೇ ಕೈಕೈ ಹಿಡಿದು ವಿಮಾನನಿಲ್ದಾಣದಿಂದ ಹೊರಬಂದಿದ್ದಾರೆ. ಜೊತೆಗೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.
ಇಶಾನ್ ಖಟ್ಟರ್ ಮತ್ತು ಅನನ್ಯ ಪಾಂಡೆ ಜೊತೆಯಾಗಿ ಖಾಲಿಪೀಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಮಹತ್ವ ಕಲ್ಪಿಸುವ ಅಗತ್ಯವಿಲ್ಲ ಎಂದು ನಿರ್ದೇಶಕ ಮುಕ್ಬುಲ್ ಖಾನ್ ತಿಳಿಸಿದ್ದಾರೆ.
ರಾತ್ರಿ ಪಾರ್ಟಿಗಳು ಸೇರಿದಂತೆ ಎಲ್ಲೆಡೆ ಇವರಿಬ್ಬರು ಜೊತೆಯಾಗಿ ಓಡಾಡುತ್ತಿರುವುದು ನೋಡಿದ ಬಾಲಿವುಡ್ ಮಂದಿ ಇಬ್ಬರ ಮಧ್ಯೆ ಗುಸುಗುಸು ಇದೆ ಎನ್ನುವುದು ಖಚಿತವಾಗಿದೆ