ಬೀದರ. ಏ. 12: ಚುನಾವಣೆಗಳು ವ್ಯವಸ್ಥಿತವಾಗಿ ನಡೆಯಬೇಕಾದರೆ ಇವಿಎಮ್ ಮತ್ತು ವಿವಿಪ್ಯಾಟ್ ನಿರ್ವಹಣೆಯ ಎಲ್ಲಾ ಹಂತಗಳನ್ನು ಅಧಿಕಾರಿಗಳು ಪಾಲಿಸಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಸೋಮವಾರ ಡಾ. ಚನ್ನಬಸವ ಪಟ್ಟದೇವರು ್ಲ ರಂಗಮಂದಿರದಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ- 2023 ತೈಯಾರಿ ಕುರಿತು ಆರ್.ಓ. ಎ.ಆರ್.ಓ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಚುನಾವಣೆ ನಿರ್ವಹಣೆ ಕುರಿತು ಕರೆದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ತರಬೇತಿ ಕೊಡುವುದರಿಂದ ಮೊದಲು ತಾವು ಪರಿಪೂರ್ಣರಾಗುತ್ತಿರ ಅಂದಾಗ ಮಾತ್ರ ಚುನಾವಣೆಗಳು ಸುಸೂತ್ರವಾಗಿ ನಡೆಸಬಹುದು. ಮತದಾನ ದಿನದಂದು ಪೆÇೀಲಿಂಗ್ ಭೂತನಲ್ಲಿ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಇರುವಂತೆ ನೋಡಿಕೊಳ್ಳಬೇಕು ಮತ್ತು ಮತಯಂತ್ರಗಳನ್ನು ಒಂದಕ್ಕೊಂದು ಜೋಡಿಸುವ ವಿಧಾನ. ಮಾಕ ಪೆÇೀಲ. ಸೀಲಿಂಗ ವಿಧಾನ. ಮತದಾನ ಪ್ರಾರಂಭದಿಂದ ಎಲ್ಲಾ ಹಂತದ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ತಿಳಿದುಕೊಂಡಿರಬೇಕೆಂದರು.
ಮೇ. 10 ರಂದು ನಡೆಯುವ ಮತದಾನ ದಿನದಂದು ಅಧಿಕಾರಿಗಳು ಬೆಳಿಗ್ಗೆ 5;30 ಗಂಟೆಗೆ ಮತದಾನ ಕೇಂದ್ರದೊಳಗೆ ಹಾಜರಿರಬೇಕು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಗಳ ವರೆಗೆ ಮತದಾನ ನಡೆಯುತ್ತದೆ. ಮತಗಟ್ಟೆ ಕೇಂದ್ರದ ನೂರು ಮೀಟರ್ ಒಳಗಡೆ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.
ಪೆÇೀಲಿಂಗ್ ಏಜೆಂಟರ ಹತ್ತಿರ ಅಧಿಕೃತ ಮತದಾರರ ಪಟ್ಟಿ ಇದೆಯೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಅರ್.ಓ ಮತ್ತು ಎ.ಆರ್.ಓ ಅವರಿಗೆ ಮಾತ್ರ ಮತದಾನ ಕೇಂದ್ರದ ಒಳಗಡೆ ಮೊಬೈಲ್ ಫೋನ್ ಬಳಸಲು ಅವಕಾಶ ಇರುತ್ತದೆ ಇವರನ್ನು ಹೊರತು ಪಡಿಸಿ ಬೇರೆ ಯಾರು ಮತದಾನ ಕೇಂದ್ರದ ಒಳಗಡೆ ಮೊಬೈಲ್ ಉಪಯೋಗಿಸುವಂತಿಲ್ಲ ಎಂದರು.
ಅಧಿಕೃತ ಪತ್ರಕರ್ತರು ಮತಗಟ್ಟೆ ದ್ವಾರ ಬಾಗಿಲಿನಿಂದ ಮಾತ್ರ ಪೆÇೀಟೊ ವಿಡಿಯೋಗಳನ್ನು ಮಾಡಲು ಅವಕಾಶವಿರುತ್ತದೆ. ಮತಗಟ್ಟೆಯ ಅಧಿಕಾರಿಗಳು ಚುನಾವಣೆಯ ರಹಸ್ಯವನ್ನು ಕಾಪಾಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಮತದಾನ ಮಾಡಲು ಅವಕಾಶವಿರುತ್ತದೆ ಎಂದರು.
ಅಂಗವಿಕಲರು. ವಯಸ್ಸಾದವರು. ಮತದಾನ ಮಾಡಲು ಆಗದೆ ಇರುವಂತ ದುರ್ಬಲರು ತಮ್ಮ ಜೊತೆಗೆ ಒಬ್ಬರು ಸಂಗಡಿಗರನ್ನು ಕರೆತರಲು ಅವಕಾಶವಿರುತ್ತದೆ ಅವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಮತದಾನ ದಿನದಂದು ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ಹಾಗೂ ಬಸವಕಲ್ಯಾಣದ ಸಹಾಯಕ ಆಯುಕ್ತರು. ಆರ್.ಓ. ಎ.ಆರ್.ಓ. ಮತ್ತು ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.