ಇವಿಎಂ ಬಳಕೆಯೊಂದಿಗೆ ಮತದಾನ ಮಾಡಿದ ವಿದ್ಯಾರ್ಥಿಗಳು

ಸೈದಾಪುರ:ಜು.24:ಪಟ್ಟಣದ ಪ್ರತಿಷ್ಠಿತ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ 2022-23ನೇ ಸಾಲಿನ ಶಾಲಾ ಅಣಕು ಸಂಸತ ಚುನಾವಣೆ ಜರುಗಿತು. 8,9,10ನೇ ತರಗತಿಯ ವಿದ್ಯಾರ್ಥಿಗಳು ಆಯಾ ವರ್ಗಗಳ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡಿದರು. ಮೊಬೈಲ ಬಳಕೆ ಮಾಡಿಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಅದರಲ್ಲಿ ಸಿದ್ಧ ಪಡಿಸಿ ಚುನಾವಣೆ ಆಯೋಗ ಮಾಡುವ ರೀತಿಯಲ್ಲಿ ಮತ ಚಲಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಮಕ್ಕಳಲ್ಲಿ ಹೊಸ ಅನುಭವ ನೀಡುತ್ತಿವಂತಿತ್ತು. ಇದರಿಂದ ಮತ ಚಲಾವಣೆ ಹಾಗೂ ಮತ ಏಣಿಕೆ ಸುಲಭವಾಯಿತು.

ಸಾಲಾಗಿ ನಿಂತು ವಿದ್ಯಾರ್ಥಿಗಳು ಮತದಾನ ಮಾಡಿದರು. ಪ್ರತಿ ಮತಕೇಂದ್ರದಲ್ಲಿ ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಮತದಾನದ ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಮೊಬೈಲದಲ್ಲಿ ಅಳವಡಿಸಿಲಾದ ಇವಿಎಂ ಯಂತ್ರಗಳಲ್ಲಿನ ಮತಗಳನ್ನು ಎಣಿಕೆ ಮಾಡಲಾಯಿತು. ಅತಿ ಹೆಚ್ಚು ಮತಗಳÀ ಪಡೆದ ಅಭ್ಯರ್ಥಿಗಳ ಘೋಷಣೆ ಮಾಡಲಾಯಿತು.

ಮುಖ್ಯಗುರು ಲಿಂಗಾರಡ್ಡಿ ನಾಯಕ, ಶಿಕ್ಷಕರಾದ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶಿನಾಥ ಶೇಖಸಿಂದಿ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ಭೀಮಣ್ಣ ನಾಯಕ, ಶಿವಕುಮಾರ ಬಂಡಿ, ಸತೀಶ ಪೂರ್ಮಾ, ಸಂಗಾರಡ್ಡಿ, ತೊಟೇಂದ್ರ, ಹೊನ್ನಪ್ಪ ಸಗರ, ರಾಚಪ್ಪ, ಶೋಭಾ, ಸೌಮ್ಯ ಇವರುಗಳು ಅಣಕು ಸಂಸತ್ ಚುನಾವಣಾ ಪ್ರಕಿಯೆಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಚುನಾವಣಾ ಆಯೋಗದಂತೆ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು


 ಈ ವರ್ಷದ ಅಣಕು ಸಂಸತ ರಚನೆ ವಿಶೇಷತೆಯಿಂದ ಕೂಡಿದೆ. ಸಿಬ್ಬಂದಿಗಳು ಸೇರಿಕೊಂಡು ಮೊಬೈಲಯದಲ್ಲಿ ಇವಿಎಂ ಮತ ಯಂತ್ರಗಳನ್ನು ಸಿದ್ದಪಿಡಿಸಿ ಅಭ್ಯರ್ಥಿಗಳ ಹೆಸರುಗಳ ಮುಂದೆ ಮತ ಚಲಾವಣೆ ಮಾಡುವ ಮೂಲಕ ತಮ್ಮ ಮತದಾನ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಮತದಾನ ನೈಜತೆಯನ್ನು ತಿಳಿಸುವಂತಿದೆ. ಇದರಿಂದ ಮತದಾನ ಹಾಗೂ ಮತ ಏಣಿಕೆ ಬಹಳ ಸುಲಭವಾಯಿತು. ಮಕ್ಕಳಿಗೂ ಸಿಬ್ಬಂದಿಗಳಿಗೂ ಇದೊಂದು ತರಬೇತಿಯಂತಿತ್ತು.
             ಲಿಂಗಾರೆಡ್ಡಿ ನಾಯಕ ಮುಖ್ಯಗುರುಗಳು .ವಿ.ವ.ಪ್ರೌ.ಶಾ.ಸೈದಾಪುರ

ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಜೆಗಳೇ ಆಧಾರ ಇವತ್ತಿನ ಮಕ್ಕಳು ಮುಂದಿನ ನಾಗರಿಕರಾಗುವುದರಿಂದ ಅವರಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಬಗಗೆ ತಿಳಿಸಬೇಕಾಗಿರುವುದು ಅತಿ ಮುಖ್ಯವಾಗಿದೆ. ಅಲ್ಲದೆ ಅಣಕು ಸಂಸತ್ ಮಂತ್ರಿ ಮಂಡಲ ರಚನೆ ಮಾಡಿ ಅವರಿಗೆ ಶಾಲೆಯ ಎಲ್ಲಾ ಕಾರ್ಯಗಳ ಜವಬ್ದಾರಿ ನೀಡುವುದರಿಂದ ಶಾಲೆಗೂ ಅನುಕೂಲವಾಗುತ್ತದೆ.
                ಗೂಳಪ್ಪ.ಎಸ್.ಮಲ್ಹಾರ ಸಮಾಜ ವಿಜ್ಞಾನ ಶಿಕ್ಷಕರು ಸೈದಾಪುರ.