ಇವರೇ ಕೇರಳದ ಮೊದಲ ಬಸ್ ಮಹಿಳಾ ಚಾಲಕಿ

ಕೊಯಮತ್ತೂರು, ಏ. ೩- ಕೊಯಮತ್ತೂರು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಹಾಕಿದ್ದಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಕೊಯಮತ್ತೂರಿನಲ್ಲಿ ೨೪ ವರ್ಷದ ಯುವತಿಯೊಬ್ಬಳು ಪ್ರಥಮ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ೨೪ ವರ್ಷದ ಶರ್ಮಿಳಾ ಎಂಬ ಯುವತಿ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ ಬಸ್ ಚಲಾಯಿಸಿ ಗಮನ ಸೆಳೆದಿದ್ದಾರೆ.
ಕೊಯಮತ್ತೂರು ನಗರದ ಮೊದಲ ಬಸ್ ಚಾಲಕಿ ಎಂದು ಖ್ಯಾತಿ ಪಡೆದಿರುವ ಶರ್ಮಿಳಾ, ಕೊಯಮತ್ತೂರಿನ ಗಾಂಧಿಪುರಂನಿಂದ ಸೋಮನೂರು ಮಾರ್ಗದಲ್ಲಿ ಬಸ್ ಓಡಿಸುತ್ತಾರೆ. ಶರ್ಮಿಳಾ ಅವರನ್ನು ಬಸ್ಸಿನಲ್ಲಿ ಆಗಮಿಸುವ ಜನರು ಅಭಿನಂದಿಸುತ್ತಾರೆ. ಅಲ್ಲದೆ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಶರ್ಮಿಳಾ ಅವರು ವಾಹನ ಚಲಾಯಿಸುವಾಗ ಅಚ್ಚರಿಯಿಂದ ಇವರನ್ನೇ ನೋಡುತ್ತಾರೆ.
ಏಳನೇ ತರಗತಿಯಲ್ಲಿರುವಾಗಲೇ ನನಗೆ ವಾಹನ ಚಾಲನೆಯಲ್ಲಿ ಆಸಕ್ತಿ ಮೂಡಿತ್ತು. ನನ್ನ ತಂದೆ ನನಗೆ ಕನಸನ್ನು ನನಸಾಗಿಸಲು ಸಹಕರಿಸಿದರು. ನಾನು ನನ್ನ ತಂದೆಯ ಸಹಾಯದಿಂದ ಮೊದಲು ಎಲ್ಪಿಜಿ ಆಟೋ ಓಡಿಸುತ್ತಿದ್ದೆ. ನನ್ನ ತಂದೆಯೇ ನನಗೆ ವಾಹನಗಳನ್ನು ಸರಿಯಾಗಿ ಓಡಿಸಲು ಮತ್ತು ಪರವಾನಗಿ ಪಡೆಯಲು ಸಹಾಯ ಮಾಡಿದರು. ಬಳಿಕ ಬಸ್ ಚಾಲನಾ ಪರವಾನಗಿ ಪಡೆದೆ. ಸಮಾಜದಲ್ಲಿ ಅನೇಕರು ಚಾಲಕರನ್ನು ಕೀಳಾಗಿ ಕಾಣುತ್ತಾರೆ. ಕೀಳಾಗಿ ಕಾಣುವ ಚಾಲನಾ ವೃತ್ತಿಯಲ್ಲಿ ನಾನು ಹೆಚ್ಚಿನ ಆಸಕ್ತಿ ಹೊಂದಿದ್ದೇನೆ ಎಂದು ಶರ್ಮಿಳಾ ಹೇಳಿದರು.
ಶರ್ಮಿಳಾ ಅವರು ೨೦೧೯ರಿಂದ ಕೊಯಮತ್ತೂರಿನಲ್ಲಿ ಆಟೋ ಓಡಿಸುತ್ತಿದ್ದರು. ಇವರು ಸರ್ಕಾರಿ ನೌಕರಿಗಾಗಿ ಕಾಯದೇ ಖಾಸಗಿ ಬಸ್ವೊಂದರಲ್ಲಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.