ಇಳಿವಯಸ್ಸಿನ ಹಿರಿಯರನ್ನು ಗೌರವದಿಂದ ಕಾಣಬೇಕು: ಚಂಬಿ

ಭಾಲ್ಕಿ : ನ.21 : ಮಕ್ಕಳ ಉಜ್ವಲ ಭಿವಿಶ್ಯಕ್ಕಾಗಿ ಜೀವನುದ್ದಕ್ಕು ಬಡಿದಾಡಿದ ತಂದೆ ತಾಯಿಯರನ್ನು ಇಳಿವಯಸ್ಸಿನಲ್ಲಿ ಪ್ರೀತಿ, ಗೌರವದಿಂದ ಕಾಣಬೇಕು,ಇದುವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರು, ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಪ್ರತಿಪಾದಿಸಿದರು.

ಪಟ್ಟಣದ ಶರಣೆ ಸಾವಿತ್ರಿ ಧನರಾಜ ಪಾಟೀಲ್ ಅವರ ನಿವಾಸದಲ್ಲಿ ಲಿಂಗೈಕ್ಯ ನಾಗಶೆಟ್ಟೆಪ್ಪ ಪಾಟೀಲ್ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಚನ ಸಾಹಿತ್ಯ ಪರಿಷತ್, ಮಹಿಳಾ ಕದಳಿ ವೇದಿಕೆ ಅಡಿಯಲ್ಲಿ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವಂತ ಇರುವಾಗ ತಂದೆ ತಾಯಿಯರನ್ನು ಪ್ರೀತಿ ಗೌರವದಿಂದ ಕಾಣದ ಮಕ್ಕಳು ಅವರು ಲಿಂಗೈಕ್ಯರಾದ ನಂತರ ವೈಭವದ ಪುಣ್ಯಸ್ಮರಣೋತ್ಸವ ಮಾಡುವುದರಲ್ಲಿ ಯಾವ ಅರ್ಥವಿರವುದಿಲ್ಲ, ಸಮಾಜದಲ್ಲಿ ವೃದ್ಧಾಶ್ರಮಗಳು ಇರಕೂಡದು ಎಂದು ತಿಳಿಸಿದರು.

12ನೇ ಶತಮಾನದ ಬಸವಾದಿ ಶರಣರು ಇವನಾರವ ಇವನಾರವ ಎನ್ನದೆ ಇವ ನಮ್ಮವ ಎನ್ನುವ ವಿಶ್ವ ಕುಟುಂಬಿ ಸಂಸ್ಕøತಿ ಕೊಡಮಾಡಿದ್ದಾರೆ, ಆ ಭವ್ಯ ಸಂಸ್ಕøತಿ ಪ್ರತಿಯೊಬ್ಬರ ಜೀವನದಲ್ಲಿ ಆಚರಣೆಗೆ ಬರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಸನ್ನಿಧಾನ ವಹಿಸಿದ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಶರಣೆ ಮಲ್ಲಮ್ಮ ನಾಗನಕೇರೆ ಮಾತನಾಡಿ, ಮಹಿಳೆಯರು ಸಮಾಜದ ,ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ, ಅವರು ಸದಾ ಶರಣ ಸಂಸ್ಕøತಿ ಮೈಗೂಡಿಸಿ ಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಚನ ಸಾಹಿತ್ಯ ಶರಣರು ನಮಗಾಗಿ ಬಿಟ್ಟು ಹೋಗಿರುವ ಅಮೂಲ್ಯ ಸಂಪತ್ತಾಗಿದೆ, ಪ್ರತಿಯೊಬ್ಬ ಮಹಿಳೆ ವಚನ ಸಾಹಿತ್ಯ ಪಠಣ ಮಾಡಬೇಕು ಎಂದು ತಿಳಿಸಿದರು.

ಸ್ಥಳಿಯ ಬಿಕೆಐಟಿ ಕಾಲೇಜಿನ ಪ್ರೊ.ಗೀತಾ ಪಾಟೀಲ್ ಮಾತನಾಡಿ, ಯೋಗ ಮತ್ತು ಶಿವಯೋಗದಲ್ಲಿ ಬಹು ದೊಡ್ಡ ಶಕ್ತಿ ಅಡಕವಗಿದೆ, ಪ್ರತಿಯೊಬ್ಬರು ಶಿವಯೋಗಿಗಳಾಗಬೇಕು ಎಂದು ತಿಳಿಸಿದರು.

ವಿರೇಶ ಪಟೀಲ್, ನಾಗರಾಜ ಭುಸಾರೆ, ಶ್ರೀಕಾಂತ ಪಾಟೀಲ್, ಛಾಯಾ ರಾಜಭವನ, ಗಂಗಾ ಅಷ್ಟುರೆ, ಶೋಭಾವತಿ ಸವಾಳೆ, ಶಿವಕಲ್ಯಾಣಿ ನಾಗನಕೇರೆ, ಜೈಶ್ರೀ ಪಾಟೀಲ್, ಮಮತಾ ಬಿರಾದಾರ, ಸಾವಿತ್ರಿ ದಾಡಗೆ, ದೇವಿಕಾ ಭಾಲ್ಕೆ, ಭಾರತಿ ಬಿರಾದಾರ, ಮಮತಾ ಪಾಟೀಲ್ ಇತರರು ಇದ್ದರು. ಸವಿತಾ ಲೋಖಂಡೆ, ರೂಪಾ ಧೂಳೆ ಸಾಮೂಹಿಕ ಪ್ರಾರ್ಥನೆ ನಡೆಸಿ ಕೊಟ್ಟರು. ಪ್ರೊ.ಗೀತಾ ಪಾಟೀಲ್ ನಿರೂಪಿಸಿದರು. ಸಾವಿತ್ರಿ ಪಾಟೀಲ್ ಸ್ವಾಗತಿಸಿದರು. ಧನರಾಜ ಪಾಟೀಲ್ ವಂದಿಸಿದರು.