ಇಳಿದ ಸೋಂಕು : ನಿಲ್ಲದ ಸಾವು

ನವದೆಹಲಿ, ಜೂ.೫- ದೇಶದಲ್ಲಿ ಸರಿಸುಮಾರು ಎರಡು ತಿಂಗಳ ಬಳಿಕ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.ಆದರೆ ಕಳೆದ ಕೆಲವು ದಿನಗಳಿಂದ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹಾವು ಏಣಿ ಆಟ ಆಡುತ್ತಿದೆ.
೫೮ ದಿನಗಳ ಬಳಿಕ ಕೊರೊನಾ ಸೋಂಕು ಸಂಖ್ಯೆ ೧.೨೦ ಲಕ್ಷ ಕ್ಕೆ ಕುಸಿದಿದೆ. ಈ ನಡುವೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೩ ಸಾವಿರ ಗಡಿ ದಾಟಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಗುವಂತೆ ಮಾಡಿದೆ.
ಕರ್ನಾಟಕ-ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ೧೫ರಿಂದ ೨೦ ಸಾವಿರ ಆಜುಬಾಜಿನಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸಂಖ್ಯೆ ೧ ಲಕ್ಷ ಗಡಿ ದಾಟುತ್ತಿದೆ.
ದೇಶದಲ್ಲಿ ಹೆಚ್ಚು ಸೋಂಕು ದಾಖಲಾಗುತ್ತಿದೆ ಮಹಾರಾಷ್ಟ್ರ ದೆಹಲಿ ರಾಜಸ್ಥಾನ ಚಂದೀಗಢ ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಹೀಗಾಗಿ ದೇಶದಲ್ಲಿ ಸೋಂಕು ಸಂಖ್ಯೆ ಇಳಿಮುಖವಾಗುತ್ತಿದೆ
೧.೨೦ಲಕ್ಷ ಪ್ರಕರಣ:
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೧,೨೦,೫೨೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೩,೩೮೦ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿನಿಂದ ೧,೯೭,೮೯೪ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ಕಳೆದ ಹಲವು ವಾರಗಳಿಂದ ಸೋಂಕಿನಿಂದ ಚೇತರಿಕೆ ಪ್ರಮಾಣ ಎರಡು ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನಿತ್ಯ ದಾಖಲಾಗುತ್ತಿತ್ತು ಇದೀಗ ಮತ್ತೆ ಚೇತರಿಕೆ ಪ್ರಮಾಣ ಎರಡು ಲಕ್ಷಕ್ಕೂ ಕಡಿಮೆ ಕುಸಿದಿವೆ. ಇದು ಕೂಡ ಕೇಂದ್ರ ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಗುರಿಮಾಡುತ್ತದೆ
ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ದಾಖಲಾಗಿರುವ ಕೊರೊನಾ ಸೋಂಕು ಸಂಖ್ಯೆ ಸೇರಿದಂತೆ ದೇಶದಲ್ಲಿ ಒಟ್ಟಾರೆ ಇಲ್ಲಿಯತನಕ ಒಟ್ಟಾರೆ ೨,೮೬,೯೪,೮೭೯ ಸೋಂಕು ಏರಿಕೆಯಾಗಿದೆ.ಜೊತೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ೨,೬೭,೯೫,೫೪೯. ಏರಿಕೆಯಾಗಿದೆ. ಇಲ್ಲಿಯವರೆಗೆ ಸೋಂಕಿನಿಂದ ೩,೪೪,೦೮೨ ಮಂದಿ ಸಾವನ್ನಪ್ಪಿದ್ದಾರೆ

ಕುಸಿದ ಸಕ್ರಿಯ ಪ್ರಕರಣ:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖೆ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿತ ಕಂಡಿದೆ

ಸದ್ಯ ದೇಶದಲ್ಲಿ ೧೫,೫೫,೨೪೮ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಮೇ ಮಧ್ಯಭಾಗದಿಂದ ಇಲ್ಲಿಯವರೆಗೂ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ ಇದು ಆಶಾದಾಯಕ ಬೆಳವಣಿಗೆ ಆದರೆ ಜನರು ಕೊರೋನಾ ಸೂಕ್ತ ನಿಯಮಗಳನ್ನು ಪಾಲಿಸುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದೆ

೨೨.೭೮ ಕೋಟಿ?ಗೆಗೆ ಲಸಿಕೆ

ದೇಶದಲ್ಲಿ ಇದುವರೆಗೂ ೨೨ ಕೋಟಿಗೂ ಅಧಿಕ ಜನರಿಗೆ ಮೊದಲ ಮತ್ತು ಎರಡನೆಯ ಡೋಸ್ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ನಿನ್ನೆ ಸಂಜೆ ತನಕ ದೇಶದಲ್ಲಿ ೨೨,೭೮,೬೦,೩೧೭ ಮಂದಿಗೆ ಲಸಿಕೆ ಹಾಕಲಾಗಿದೆ ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಲಸುಕೆಯ ದಾಸ್ತಾನು ಆಧರಿಸಿ ಹೆಚ್ಚಿಗೆ ಮಾಡಲಾಗುವುದು ಎಂದು ತಿಳಿಸಿದೆ.