ಇಲ್ಲಿ ತಾಜಾ ತಾಜಾ ಐಟೇಮ್ಸ್ 15 ರೂ.ಗೆ ಪ್ಲೇಟ್ತಾಳಿಕೋಟೆಯಲ್ಲಿ ಬಡವರ ಬಂಧು ವಾಗಿರುವ ಈರಣ್ಣ ಹೋಟೇಲ

ಜಿ.ಪಿ. ಘೋರ್ಪಡೆ

ತಾಳಿಕೋಟೆ:ಜೂ.10:ಪಟ್ಟಣದಲ್ಲಿ ಚಿಕ್ಕದಾಗಿ ಚೊಕ್ಕವೆಂಬಂತೆ ಹೋಟೇಲವೊಂದನ್ನು ಕಳೆದ 40 ವರ್ಷಗಳಿಂದ ನಡೆಸಿಕೊಂಡು ಸಾಗಿಬಂದ ಮಾಲಿಕರಾದ ಈರಣ್ಣ ಬಸಣ್ಣ ಬಬಲೇಶ್ವರ ಆತ ತಾನು ಬಡತನದಲ್ಲಿ ಸಾಗಿಬಂದಿದ್ದನ್ನು ಲಕ್ಷೀಸಿಕೊಂಡು ತನ್ನ ಹೋಟೇಲ್‍ನಲ್ಲಿ ಅಗ್ಗದರದ ತಿಂಡಿತಿನಿಸುಗಳನ್ನು ಮಾಡಿ ಗ್ರಾಹಕರಿಗೆ ತಾಜಾ ತಾಜಾ ದಿನನಿತ್ಯ ನೀಡಿ ಉತ್ತಮ ಚಿಕ್ಕ ಚೋಕ್ಕದಾದ ಹೋಟೇಲ್ ಈರಣ್ಣ ಹೋಟೇಲ್ ಎಂದೆನಿಸಿಕೊಂಡಿರುವ ಈ ಈರಣ್ಣ ತನ್ನ ಮನೆತನದ ಕುಟುಂಭದವರನ್ನು ಹೋಟೇಲ್ ಕಾಯಕದಲ್ಲಿ ತೊಡಗಿಸಿಕೊಂಡು ದಿನನಿತ್ಯ ತಯಾರಿಸುತ್ತಿರುವ ತಿಂಡಿ ತಿನಿಸುಗಳಲ್ಲಿ ಸೈಎನಿಸಿಕೊಂಡಿದ್ದಾನೆಂದು ಹೇಳಿದರೆ ತಪ್ಪಾಗಲಾರದು.

ಈತನ ಹೋಟೇಲ್‍ದಲ್ಲಿ ದಿನನಿತ್ಯ ಗ್ರಾಹಕರ ಅನುಕೂಲಕ್ಕಾಗಿ ಅಗ್ಗ ದರದ ಅಂದರೆ ಅಲ್ಲಿ ತಯಾರಾಗುತ್ತಿರುವ ಪ್ರತಿಯೊಂದು ತಿನಿಸು ಪ್ಲೇಟ್ ಒಂದಕ್ಕೆ ಕೇವಲ 15 ರೂ ಮಾತ್ರ ನಿಗಧಿಪಡಿಸಿದ್ದಾನೆ ಈ ಅಂದರೆ 15 ದಿವಸಗಳ ಹಿಂದೆ ತಾನು ಗ್ರಾಹಕರಿಗೆ ನೀಡುತ್ತಿರುವ ತಿಂಡಿ ತಿನಿಸುಗಳಿಗೆ 10 ರೂ. ಪ್ಲೇಟ್ ಒಂದಕ್ಕೆ ಇಟ್ಟಿದ್ದ ಈಗ ಮಹಾಗಾಯಿ ಎಂಬುದು ಹೆಚ್ಚಿಗೆ ಆಗುತ್ತಿರುವ ಕಾರಣದಿಂದ ಈತ ಕೇವಲ 5 ರೂ. ಮಾತ್ರ ಹೆಚ್ಚಿಸಿ ಪ್ಲೇಟ್ ಒಂದಕ್ಕೆ 15 ರೂ. ಮಾಡಿದ್ದಾನೆ.

ಈ ಈರಣ್ಣ ಹೋಟೇಲ್‍ದಲ್ಲಿ ಮುಂಜಾನೆ 6 ಗಂಟೆಗೆ ತಯಾರಾಗುತ್ತಿರುವ ತಿಂಡಿ ತಿನಿಸುಗಳಲ್ಲಿ ಇಡ್ಲಿ ಸಾಭಾರ, ಪುರೇ ಭಾಜಿ, ಸುಸಲಾ, ಹಾಗೂ ಚೋಡಾ ಅಂದರೆ ಈ ಭಾಗದಲ್ಲಿ ಪಂಚರಂಗಿ ಎಂದು ಕರೆಯುತ್ತಾರೆ ಈ ಎಲ್ಲ ಪ್ರತಿಯೊಂದು ತಿನಿಸುಗಳಿಗೆ ಪ್ರತಿಯೊಂದು ತಿನಿಸಿನ ಪ್ಲೇಟ್ ಗೆ 15 ರೂ. ಮಾತ್ರ ಮಾಡಿದ್ದಾನೆ.

ಈ ಈರಣ್ಣನ ಹೋಟೇಲ್‍ನಲ್ಲಿ ದಿನನಿತ್ಯ ಗ್ರಾಹಕರು ಈ ಎಲ್ಲ ಐಟೇಮ್ಸ್‍ಗಳಲ್ಲಿ ಯಾವುದೇ ಐಟಮ್ ತಿಂದರೂ ಅಥವಾ ಪಾರ್ಸಲ್ ತೆಗೆದುಕೊಂಡು ಹೋದರೆ ಒಂದು ಪ್ಲೇಟ್‍ಗೆ 15 ರೂ. ಮಾತ್ರ. ಈ ಕಾರಣದಿಂದ ಪ್ರತಿದಿನ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಗ್ರಾಹಕರ ದಟ್ಟನೆ ಕಂಡುಬಂದರೂ ಕಡಿಮೆ ಬೆಲೆಗೆ ತಿನಿಸುಗಳು ಇದ್ದ ಕಾರಣ ಸಂಜೆಯ ವರೆಗೂ ಹೋಟೇಲ್‍ದಲ್ಲಿ ಮಾಡಿದ ವ್ಯಾಪಾರ ತಾ ತಂದ ಮಾಲು ಮಸಲುಗಳಲ್ಲದೇ ಹೋಟೇಲ್‍ದಲ್ಲಿ ಕಾಯಕಕ್ಕೆ ಮುಂದಾಗಿರುವ ಈರಣ್ಣ ಹಾಗೂ ಆತನ ಧರ್ಮ ಪತ್ನಿ, ಅಲ್ಲದೇ ಪುತ್ರ ಬಸಣ್ಣ ಇವರ ದುಡಿತಕ್ಕೆ ದೋರೆಯುತ್ತಿರುವ ಸಾಮಾನ್ಯ ವೇತನವಷ್ಟೇ ಪಡೆದಂತಾಗುತ್ತದೆ ಎಂಬ ಮಾತು ಹೋಟೇಲ್ ಮಾಲಿಕ ಈರಣ್ಣ ಹಾಗೂ ಆತನ ಪುತ್ರ ಬಸವರಾಜ ಅವರ ಮಾತಾಗಿದೆ.

ವರ್ಷಕ್ಕೆ ಸುಮಾರು 50 ಸಾವಿರ ರೂ. ಹೋಟೇಲ್ ಬಾಡಿಗೆ ನೀಡುತ್ತಾ ಗ್ರಾಹಕರ ಅನುಕೂಲಕ್ಕಾಗಿ ಮುಂದಾಗಿರುವ ಈರಣ್ಣನ ಬಧುಕು ಸಾಯಿಬೇಡ, ಬಧುಕಬೇಡಾ ಎಂಬ ಸ್ಥಿತಿಯಂತಾಗಿದೆ ಎಂದು ಪತ್ರಿಕೆಯ ಮುಂದೆ ಈರಣ್ಣ ಹಾಗೂ ಬಸಣ್ಣನವರು ತಮ್ಮ ಅಳಿಲು ತೋಡಿಕೊಂಡಿದ್ದಾರೆ.

ಈರಣ್ಣ ಈ ಹಿಂದಿನಿಂದ ಮಾಡಿಕೊಂಡು ಬಂದಂತಹ ಹೋಟೇಲ್ ವೃತ್ತಿ ಇದನ್ನು ಕೈಬಿಡದಂತಾಗಿದೆ ವಯೋಮಿತಿ 60 ವರ್ಷ ಮೇಲ್ಪಟ್ಟಿದ್ದರೂ ಮಕ್ಕಳು ಕೈಗೆ ಬಂದಿದ್ದರಿಂದ ಅದನ್ನೇ ಮುಂದುವರೆಸಿಕೊಂಡು ಸಾಗಿದ್ದೇವೆ. ಕಡಿಮೇ ಕಡಿಮೇದರದಲ್ಲಿ ನಾನು ತಯಾರಿಸುತ್ತಿದ್ದ ಐಟಮ್ಸ್‍ಗಳನ್ನು ನನ್ನ ಜೀವನ ಇರುವವರೆಗೂ ಮಾರಾಟ ಮಾಡುತ್ತಾ ಗ್ರಾಹಕರಿಂದ ಮೇಚ್ಚುಗೆಗೆ ದಿನನಿತ್ಯ ದೋರೆಯುತ್ತದೆ ಅಲ್ಲಾ ಅದುವೇ ನನ್ನ ದಿನದ ಇನ್‍ಕಮ್ ಸರ್ ಎನ್ನುತ್ತಿರುವ ಕಾಯಕವಂತ ಈರಣ್ಣ ಬಬಲೇಶ್ವರ ಅಂತವನಿಗೆ ಸರ್ಕಾರವಾಗಲಿ ಶಾಸಕ ಸಚೀವರಾಗಲಿ ಒಂದು ಸೂಕ್ತ ಜಾಗೆಯನ್ನು ಒದಗಿಸಿಕೊಟ್ಟರೇ ಈಗ ನೀಡುತ್ತಿರುವ ಬಾಡಿಗೆಯಾದರೂ ಉಳಿತಾಯವಾಗಿ ಆತನ ಮಕ್ಕಳು, ಮೊಮ್ಮಕ್ಕಳಿಗಾದರೂ ಅನುಕೂಲವಾಗಬಹುದು ಎಂಬ ಅನಿಸಿಕೆ ಪ್ರಜ್ಞಾವಂತ ನಾಗರಿಕರದ್ದಾಗಿದೆ.


ಬಡವರಿಗೆ ಅಗ್ಗದ ದರದಲ್ಲಿ ಹೋಟ್ಟೆ ತುಂಬಿಸುವಂತಹ ಕಾರ್ಯ ಈರಣ್ಣ ಬಬಲೇಶ್ವರ ಕುಟುಂಭ ಮಾಡುತ್ತಾ ಬಂದಿರುವದು ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಇಂತಹ ಹೋಟೇಲ್ ಮಾಲಿಕರ ಸಹಾಯಕ್ಕೆ ಸರ್ಕಾರ ನಿಲ್ಲಬೇಕಿದೆ. ಇದರಿಂದ ಬಡವರಿಗೆ ಹೊಟ್ಟೆತುಂಬಿಸಿದ ಪುಣ್ಯಬರಲಿದೆ.

ಆನಂದ ಪತ್ತಾರ ಸ್ಥಳೀಯ ಗ್ರಾಹಕ