ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ:ಕಪ್ಪತಗುಡ್ಡ ಶ್ರೀ

ತಾಳಿಕೋಟೆ:ಮೇ.14: ಯಾರ್ಯಾರÀ ಸ್ಥಿತಿಗತಿ ಏನೆಂಬುದು ಹೇಗಿದೆ ಎಂಬದು ಪರಮಾತ್ಮನಿಗೆ ಗೊತಿದೆ ಯಾಕೆಂದಂರೆ ಆತನಲ್ಲಿ ಎಲ್ಲವೂ ಸಂಗ್ರಹಿಸಿಕೊಂಡಿರುವ ಹಾಗೂ ಸಂಗ್ರಹಿಸಿಕೊಳಳುವ ಡೈರಿ ಇದೆ ನಾವು ಇಲ್ಲದ್ದನ್ನು ಮಾಡಿದರೆ ನಾನು ನನ್ನದು ನಾನು ಎಂಬುದನ್ನು ಕಳೆದುಕೊಳ್ಳಬೇಕಾಗಿದೆ ಸಾಯುವ ಮುಂದೆ ಮೋಕ್ಷ ಅಪೇಕ್ಷಿಸಿದರೆ ಅದು ಸಾಧ್ಯವಾಗಲಾರದು ಯಾಕೆಂದರೆ ನಮ್ಮ ಮನಸ್ಸಿನ ಅಭಿರುಚಿಗಳು ಬೇರೆ ಬೇರೆ ಇದ್ದದ್ದೇ ಕಾರಣವೆಂದು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ನುಡುದರು.

    ಶುಕ್ರವಾರರಂದು ಸ್ಥಳೀಯ ಶ್ರೀ ಎಸ್.ಕೆ. ನಗರಾಭಿವೃದ್ದಿ ಹಾಗೂ ಶ್ರೀ ಹನುಮಾನ ಸೇವಾ ಸಮೀತಿ ವತಿಯಿಂದ ಎಸ್.ಕೆ. ನಗರದಲ್ಲಿ ಶ್ರೀ ಹನುಮಾನ್ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಉದ್ಘಾಟನಾ ಸಮಾರಂಭ ಕುರಿತು ಏರ್ಪಡಿಸಲಾದ ಆಧ್ಯಾತ್ಮಿಕ ಪ್ರವಚನದ 5ನೇ ದಿನದಂದು ಸಾರವನ್ನು ಭಕ್ತ ಸಮೂಹಕ್ಕೆ ಉಣಬಡಿಸುತ್ತಾ ಸಾಗಿದ ಶ್ರೀಗಳು ನಮ್ಮ ಸಂಸಾರ ಒದ್ದಾಟ ಗುದ್ದಾಟದಿಂದ ಕೂಡಿದೆ ಜ್ಞಾನದ ಬೆಳಕು ಅಂತರಂಗದಲ್ಲಿಲ್ಲಾ ಅದಕ್ಕೆ ಹೀಗಾಗಲಿಕ್ಕೆ ಹತ್ತಿದೆ ಎಂದ ಶ್ರೀಗಳು ಶರಣರಲ್ಲಿ ಸಂತರಲ್ಲಿ ಒದ್ದಾಟ ಗುದ್ದಾಟವೆಂಬುದಿಲ್ಲಾ ಋಷಿ ಮುನಿಗಳು ಹೇಳುವದಿಷ್ಠೇ ನಾನು ನನ್ನದು ಅನ್ನುವದನ್ನು ಬಿಡಿರಿ ಎಂಬು ಎಚ್ಚರಿಸಿದ್ದಾರೆಂದರು. ಸಾಧನೆ ಮಾಡಬೇಕು ಸ್ಸಂಗದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು ಸದ್ವಿಚಾರ ಒಳ್ಳೆಯ ಗ್ರಂಥಗಳನ್ನು ಓದಬೇಕು ಇದನ್ನೆಲ್ಲಾ ಬಿಟ್ಟು ಗಳಿಕೆ ಹಿಂದೆ ಒದ್ದಾಡುತ್ತಾ ಸಾಗಲಾಗುತ್ತದೆ ಹಾಗಾಗಬಾರದೆಂದರು.
ಉಪನಿಷತ್ ಸೂತ್ರಮಂತ್ರವೆಲ್ಲವೂ ಪರಮಾತ್ಮನ ಸ್ವರೂಪವೆಂಬುದು ಒಪ್ಪಿಕೊಳ್ಳಬೇಕಾಗಿದೆ  ಕತೃತ್ವವನ್ನು ಸಾಧಿಸುವದು ಬೃತಂತ್ವವನ್ನು ಪರಮಾತ್ಮನ ಪಾದಕ್ಕೆ ಅರ್ಪಣೆ ಮಾಡಬೇಂದು ಹೇಳಇದ ಶ್ರೀಗಳು ಚನ್ನಬಸವಣ್ಣನ ವಚನವನ್ನು ಶ್ರೀಗಳು ಪ್ರಸ್ತಾಪಿಸಿದರು. "ಇಲ್ಲಿರುವುದು ಸುಮ್ಮನೆ ಅಲ್ಲಿರುವದು ನಮ್ಮನೆ" ಎಂಬುದರ ಕುರಿತು ವಿವರಿಸಿದ ಶ್ರೀಗಳು ಈ ರೀತಿ ಅರ್ಥಮಾಡಿಕೊಂಡರೆ ಸಾಕು ಬರಲಾರದ ನಿದ್ರೆ ತಾನೇ ಬರುತ್ತದೆ ಎಂದರು. ಮನುಷ್ಯರಲ್ಲಿ ಬ್ರಾಂತಿ ಎಂಬುದು ತುಂಬಿಕೊಂಡಿದೆ ಕಾರಣ ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕೆಂದು ಸಿದ್ದರಾಮಪ್ರಭು ಲಿಂಗಲೀಲೆಯಲ್ಲಿಯ ವಿಚಾರ ವ್ಯಕ್ತಪಡಿಸಿ ಅರ್ಥೈಯಿಸಿದ ಶ್ರೀಗಳು ಯಾವ ರೀತಿ ಆನೆ ಮಲಗಿದ್ದು ತನ್ನಿಂದ ತಾನೇ ಹೇಗೆ ಎದ್ದು ನಿಲ್ಲುತ್ತದೆ ಹಾಗೇ ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕಾಗಿದೆ ಎಂದರು.
 ಸಾವನ್ನು ದಂಡಿಸಬೇಕೆಂದು ಮನುಷ್ಯನಿಗೆ ಅನ್ನಿಸುತ್ತದೆ ಅದು ಸಾಧ್ಯವಾಗುವದಿಲ್ಲಾ ನಾವು ಬಂದೀವಿ ಒಂದಿಲ್ಲ ಒಂದುದಿನಾ ಹೋಗುತ್ತೇವೆ ಎಂಬುದು ತಿಳಿದುಕೊಂಡರೆ ವೇಗವೆಂಬುದು ಕಡಿಮೆಯಾಗುತ್ತದೆ ಎಂದರು. ಪಕ್ಷಿಗಳಿಗೆ ಗೂಡುಕಟ್ಟುವದು ಯಾರೂ ಹೇಳಿಲ್ಲಾ ಯಾರೂ ಕಲಿಸಿಲ್ಲಾ ಅಂತಹ ಕಾರ್ಯ ಮನುಷ್ಯನಿಂದ ಸಾಧ್ಯವಾಗಲಾರದು ಸಂಸ್ಕಾರವೆಂಬುದು ಇರಲಾರದಕ್ಕೆ ಹಾಗಾಗುತ್ತದೆ ಎಂದರು. ಋಷಿಮುನಿಗಳು ಎಲ್ಲ ಸರ್ವಶಕ್ತಿಯೂ ದೇವರದ್ದಾಗಿದೆ ಎಲ್ಲವೂ ಭಗವಂತನದ್ದು ಎಂದು ಹೇಳುತ್ತಾರೆ ಇದನ್ನು ನಮ್ಮ ಮನಸ್ಸು ಒಪ್ಪುವದಿಲ್ಲಾ ಸುಲಭವಾಗಿಯೂ ಒಪ್ಪುವದಿಲ್ಲಾ ನನ್ನ ನನ್ನದು ನಾನು ಈ ಮೂರು ವಾಕ್ಯಗಳಿವೆ ಕನ್ನಡವೊಂದಕ್ಷರ ತಪ್ಪಿದರೆ ಅನರ್ಥವಾಗಿ ಪರಿಣಮಿಸುತ್ತದೆ ಎಂದರು ನಾವು ನನ್ನ ಅನ್ನದೇ ನನ್ನದು ಅನ್ನುತ್ತಾ ನಾನು ಅನ್ನುತ್ತಾ ಅಜ್ಞಾನದ ಪರಿಣಾಮದಿಂದ ನಾ ಹೋದಂತೆ ವಿಚಾರಮಾಡುವಂತಹದ್ದಾಗಿದೆ ನನ್ನ ನನ್ನ ಅಶ್ತಿತ್ವ ಅಂದರೆ ಜೀವನಕ್ಕೆ ಅರ್ಥ ಬರುತ್ತದೆ ನನ್ನ ಅನ್ನುವದು ಎಲ್ಲಿದೆ ನನ್ನದು ನಮ್ಮದು ಮೋಹ ಮಾಯೆ ಸಂಸಾರಕ್ಕೆ ಬಂದಹಚ್ಚುತ್ತದೆ ಎಲ್ಲವೂ ಪರಮಾತ್ಮನ ಜಗತ್ತು ಎಂದು ಋಷಿ ಜ್ಞಾನಿಗಳು ಅನ್ನುತ್ತಾರೆ ಅದು ನಾವು ಒಪ್ಪುವದಿಲ್ಲಾ ಕಾರಣ ಅಮೂಲ್ಯವಾದ ಮನುಷ್ಯನ ಜೀವನ ಪಡೆದುಕೊಂಡು ಬಂದವರಾದ ನಾವು ಅಮೂಲ್ಯವಾದದನ್ನು ಅರಿತುಕೊಳ್ಳಬೇಕು ನಮ್ಮದಲ್ಲದ್ದನ್ನು ನಾವು ಸಮರ್ಥನೆ ಮಾಡಿಕೊಳ್ಳುವದನ್ನು ಋಷಿಮುನಿಗಳು ಎಚ್ಚರಿಸಿದ್ದಾರೆ ನನ್ನದು ಅಷ್ಟಕ್ಕೆ ಬಿಡದೇ ನನ್ನ ಸಂಪತ್ತು ಎಂಬ ಅನೇಕ ಭ್ರಮೆಗಳು ಜ್ಞಾನದ ಪಥದಿಂದ ಕೆಳಗಿಳಿಯುತ್ತಾ ಸಾಗಿವೆ ಎಂದರು.
  ಬಹಳ  ಹಚ್ಚಿಕೊಂಡರೆ ನಮ್ಮನ್ನು ಮುಚ್ಚಿಸಿಬಿಡುತ್ತದೆ ಎಮ್ಮೆ ಸ್ನಾನ ಮಾಡಿ ಎಲ್ಲರಿಗೂ ಸಿಂಪಡಿಸಿ ಹೊಲಸು ಮಾಡಿದಂತೆ ನಮ್ಮ ಬಾಳ್ವೆಯಾಗಿದೆ ಎಂದರು. ಮನುಷ್ಯ ಒಬ್ಬಂಟಿಯಾಗಿ ಇರಲಿಕ್ಕೆ ಹೆದರುತ್ತಾನೆ ಯಾಕೆಂದರೆ ಭಗವಂತನಲ್ಲಿ ಶ್ರದ್ದೆ ಇರುವದಿಲ್ಲಾ ಕಾರಣ ಶರಣರ ಸಂತರ ಏಕಾಂತವಾಸವೇ ಬೇರೆ ಭಗವಂತ ನಮ್ಮ ಜೊತೆ ಯಾವತ್ತೂ ಇರುತ್ತಾನೆ ಆದರೆ ನಂಬಿಕೆ ಇಡಬೇಕೆಂದರು. ಹೊಲ ಹಿಡಿಯುತ್ತೇವೆ, ಮನೆ ಹಿಡಿಯುತ್ತೇವೆ ಎಂಬ ವಿಚಾರ ಮಾನವರಾದ ನಮ್ಮದಾಗಿದೆ ಮನಸ್ಸು ಅಶಾಂತವಾಗಿದ್ದು ಇಲ್ಲಸಲ್ಲದ್ದನ್ನು ಮಾಡಲಿಕ್ಕೆ ಹೋಗುತ್ತೇವೆ ಇದೆಲ್ಲವನ್ನು ಭಗವಂತ ತಿಳಿದುಕೊಳ್ಳುತ್ತಾನೆ ಇರುವೆಯ ಕಾಲಿನ ಹೆಜ್ಜೆಯೂ ಸಹ ಭಗವಂತನಿಗೆ ಗುತ್ತಾಗುತ್ತದೆ ಕಾರಣ ಎಲ್ಲರೂ ಸಬಕಾ ಮಾಲೀಕ್ ಏಕ್ ಹೈ ಎಂಬುದನ್ನು ಅರ್ಥೈಯಿಸಿಕೊಂಡು ನಡೆಯಬೇಕೆಂದು ಹೇಳಿದ ಶ್ರೀಗಳು ಮನೆಮಠ ಸಂಸಾರದಲ್ಲಿ ಸಿಲುಕಿಕೊಂಡಿದ್ದೇವೆ ಪಾರಾಗುವದು ಹೇಗೆ ಎಂಬುದನ್ನು ಶ್ರೀಗಳು ಬಹು ಮಾರ್ಮಿಕವಾಗಿ ತಿಳಿಸಿದರು.
 ಇದೇ ಸಮಯದಲ್ಲಿ ಕೆಲವು ಸಾಧನೆಗೈದ ಹಾಗೂ ಈ ಕಾರ್ಯಕ್ರಮ ಕುರಿತು ಸಹಾಯ ಸಹಕಾರ ನೀಡಿದ ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
  ಗವಾಯಿ ಬಸವರಾಜ ಭಂಟನೂರ, ತಬಲಾ ಸಾತಿ ಯಮನೇಶ ಯಾಳಗಿ ಅವರು ಸಂಗೀತ ಸೇವೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಗಣ್ಯರಾದ ಬಿ.ಎಸ್.ಪಾಟೀಲ(ಯಾಳಗಿ), ಎಸ್.ಎನ್.ಪಾಟೀಲ, ಹಾಗೂ ಸೇವಾ ಸಮಿತಿಯ ಅಧ್ಯಕ್ಷ ಎಂ.ಎಚ್.ಚೌದ್ರಿ, ಉಪಾಧ್ಯಕ್ಷ ಡಿ.ವ್ಹಿ.ಬಡಿಗೇರ, ಕಾರ್ಯದರ್ಶಿ ನಾಗಪ್ಪ ಚಿನಗುಡಿ, ಖಜಾಂಚಿ ಬಿ.ಎಸ್.ಪಂಜಗಲ್ಲ, ಸದಸ್ಯರಾದ ಆರ್.ಎಫ್.ಹಿರೇಮಠ, ವ್ಹಿ.ಜಿ.ಗಣಾಚಾರಿ, ಎಸ್.ಎಸ್.ಹಾದಿಮನಿ, ಎಸ್.ಬಿ.ಪಾಟೀಲ, ಎನ್.ಕೆ.ಬಸರಡ್ಡಿ, ಎಸ್.ಎಸ್.ದೇಸಾಯಿ, ಎ.ಎಸ್.ಆಲ್ಯಾಳ, ಮೊದಲಾದವರು ಇದ್ದರು.

    ಶಿಕ್ಷಕ ಆರ್.ಎಫ್.ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಸಿ.ಎಂ.ಹಿರೇಮಠ ನಿರೂಪಿಸಿದರು.