ಇಲ್ಲಿನ  ಬಿರಿಯಾನಿ ತಿಂದು ಪಾಕಿಸ್ತಾನದ ಪರ ಘೋಷಣೆ ಎಫ್ ಎಸ್ ಎಲ್  ಮೇಲೆ ನಮಗ ನಂಬಿಕೆ ಇಲ್ಲ ಎನ್ ಐ ಎ  ತನಿಖೆಗೆ ಆಗಬೇಕು:ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.29: ಪಾಕಿಸ್ತಾನಕ್ಕೆ ಜಯಕಾರ ಹಾಕಿರೋ ಪ್ರಕರಣದ ತನಿಕೆ ಎಫ್ ಎಸ್ ಎಲ್ ವರದಿ ಮೇಲೆ ನಮಗೆ ನಂಬಿಕೆ ಇಲ್ಲ ಎನ್.ಐ.ಎ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ಅವರಿಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ಘಟನೆ ನಡೆದ ತಕ್ಷಣ ನಾಸೀರ್ ಹುಸೇನ್ ಅವರು ದೇಶದ ಜನರ ಕ್ಷಮೆ ಕೇಳಿ.  ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರೆ ಘಟನೆ ಅಲ್ಲಿಗೆ ಮುಗಿದು ಹೋಗುತ್ತಿತ್ತು.
ಎಪ್ ಎಸ್ ಎಲ್  ವರದಿ ಬರುವ ಮುನ್ನ ಕ್ಲೀನ್ ಚಿಟ್ ಯಾಕೆ ನೀಡಿದ್ದಾರೆ.  ಎಫ್ ಎಸ್ ಎಲ್  ವರದಿ ಅವರ ಪರವಾಗಿಯೇ‌ ಬರುತ್ತದೆ. ಹೀಗಾಗಿ ಎನ್ ಐ ಎ ಗೆ ಒಪ್ಪಿಸಬೇಕೆಂದು ಒತ್ತಾಯಿಸುವೆನೆಂದರು.‌
ನಾಸೀರ್ ಹುಸೇನ್  ಅವರು ಬಳ್ಳಾರಿಯಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾಗಿ ರೊದು ಗೌರವವಿದೆ.ಆದರೆ ಗೆದ್ದ ಮೇಲೆ ಅವರ ವರ್ತನೆ ಮಾತ್ರ ಖಂಡನೀಯ ಎಂದರು.
ಕಾಂಗ್ರೆಸ್‌ ನವರು  ತುಷ್ಠೀಕರಣದ ರಾಜಕೀಯವನ್ನು ಮಾಡ್ತಿದ್ದಾರೆ. ಭಯೋತ್ಪಾದಕರ ಪರ ಸರ್ಕಾರ ಇದೆ ಎನ್ನುವ ಅನುಮಾನವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ನೇಹಿತರ ಜೊತೆಅವರು  ನಡೆದುಕೊಂಡು ರೀತಿ ‌ಪ್ರಶ್ನೆ ಮಾಡಬೇಕಿದೆಂದರು.
ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಎನ್ನುವದು ಪದೇ ಪದೇ ಸಾಬೀತು ಮಾಡ್ತಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವಾಗ ಓರ್ವ ವ್ಯಕ್ತಿ ಬಾಯಿ ಮುಚ್ಚುತ್ತಾರೆ. ಅದನ್ನು ಮರೆಮಾಚಲು ಸಿಎಂ ಅದನ್ನು ಕೂಗಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಂತಹವರು ವಿಧಾನ ಸೌಧಕ್ಕೆ ನುಗ್ಗಿ ಬಾಂಬ್ ಇಡೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ. ಇಂದು ಪಾಕಿಸ್ತಾನದ ಪರ ಜಯಘೋಷ ಹಾಕಿದವರು ನಾಳೆ ವಿಧಾನ ಸೌಧದಲ್ಲಿ ಬಾಂಬ್ ಇಡಲು‌ಹಿಂಜರಿಯಲಾರರು ಎಂದು ಆರೋಪಿಸಿದರು
ಇಲ್ಲಿನ  ಬಿರಿಯಾನಿ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇವರಿಗೆ ಸರ್ಕಾರ ಬೆಂಬಲಿಸುತ್ತ. ಭಾರತದಲ್ಲಿ ಇರಲು ಇಷ್ಟವಿಲ್ಲ ಅಂದ್ರೆ ನಾನೇ ವಿಮಾನದ ಚಾರ್ಜ್ ಕೊಡ್ತೇನೆ ಅವರು ಪಾಕಿಸ್ತಾನಕ್ಕೆ  ಹೋಗಬಹುದೆಂದರು.‌
ಎಲ್ಲರೂ ಸ್ಪೀಕರ್ ಗೆ ಗೌರವ ನೀಡಿದ್ರೆ. ಸಚಿವ ಜಮೀರ್ ಇ ವ್ಯಂಗ್ಯವಾದ ರೀತಿಯಲ್ಲಿ ಖಾದರ್ ಗೆ ಎಲ್ಲರೂ ನಮ ಸ್ಕಾರ ಮಾಡೋ ರೀತಿ ‌ಮಾಡಿದ್ದೇವೆ ಎನ್ನುತ್ತಾರೆ.
ಕೆಜಿ ಹಳ್ಳಿ ಡಿಜಿ ಹಳ್ಳಿ ಶಾಸಕರ ಮನೆಗೆ ಬೆಂಕಿ ಹಚ್ಚುತ್ತಾರೆ.‌ ಮಂಗಳೂರು ಕುಕ್ಕರ್ ಬಾಂಬ್ ದಾಳಿಕೋರರು ಅಮಾಯಕರು ಎನ್ನುತ್ತಾರೆ ಡಿಕೆಶಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತನಿಖಾ ಅಧಿಕಾರಿ ಗಳನ್ನು ತಮಗೆ ಬೇಕಾದವರನ್ನು ನೇಮಕ ಮಾಡ್ತಾರೆಂದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆ ಖಂಡನೆ.  ಪ್ರಧಾನಿ  ಮೋದಿ ಅವರ ಬಗ್ಗೆ ಮಾತನಾಡಿರೋದು ಸರಿಯಲ್ಲ. ಹರಿಪ್ರಸಾದ್ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲೋಕೆ ಆಗಲ್ಲ. ಬ್ಯಾಕ್ ಡೋರ್ ರಾಜಕಾರಣಿ ಎಂದರು.
ನನಗೆ ಹಿಂದೂ ಮುಸ್ಲಿಂ ಬೇದಭಾವ ಇಲ್ಲ. ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ್ರೇ ಒಪ್ಪೋದಿಲ್ಲವೆಂದರು.