ಇಲ್ಲಿನ ಜಾನಪದ ರಶ್ಮಿಗಳು ಪ್ರಭಾವವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲಬಲ್ಲವುಃ ಮಹಾಂತೇಶ ಹರಗಬಾಳ

ವಿಜಯಪುರ, ನ.6-ನಮ್ಮ ಭಾರತೀಯ ಸಂಸ್ಕøತಿ ಮತ್ತು ಸಮಾಜದ ಮೇಲೆ ಪಾಶ್ಚ್ಯಾತ್ಯ ಸಾಂಸ್ಕøತಿಕ ಪ್ರಭಾವಗಳು ಎಷ್ಟೆ ಪರಿಣಾಮ ಬೀರಿದರೂ ಇಲ್ಲಿನ ಜಾನಪದ ರಶ್ಮಿಗಳು ಆ ಪ್ರಭಾವವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲಬಲ್ಲವು ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಪ್ಲೋರೋಸಿಸ್ ಸಲಹೆಗಾರ ಮಹಾಂತೇಶ ಹರಗಬಾಳ ಹೇಳಿದರು.
ಸ್ಥಳೀಯ ರಾಜಾಜಿನಗರದ ನಾಡದೇವಿ ಉತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿ ಶಂಕರ ಬೈಚಬಾಳ ಮಾತನಾಡಿ, ಇಂದು ಜಾನಪದ ಆಚರಣೆಗಳು ಜೀವಂತ ಇರುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ. ಕನ್ನಡ ಉಳಿಯಲು ಸಾಂಪ್ರದಾಯಿಕ ಆಚರಣೆಗಳು ಅವಶ್ಯ ಎಂದರು.
ಅತಿಥಿ ಡಾ. ಮುರುಗೇಶ ಸಂಗಮ ಮಾತನಾಡಿ ಇಂದಿನ ಆಚರಣೆಗಳಿಗೆ ಸಾಮಾಜಿಕ ಜವಾಬ್ದಾರಿ ಕಡಿಮೆ. ಆದರೆ ಹಳೆಯ ಕಾಲದ ದೇಶಿ ಆಚರಣೆಗಳಿಗೆ ಸಮಾಜ ಕಟ್ಟುವ ಶಕ್ತಿ ಇದ್ದು ಅಂಥ ಕಲೆಗಳು ಉಳಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯಾಂಗ ಇಲಾಖೆಯ ಅಧೀಕ್ಷಕ ಸಂಗಮೇಶ ಮನಹಳ್ಳಿ ಮಾತನಾಡಿ ಇಂದಿನ ಆಧುನಿಕತೆಯ ಅಬ್ಬರದಲ್ಲಿ ನೈಜ ಕಲೆ, ಸಂಸ್ಕøತಿ ನಶಿಸುತ್ತಿದೆ. ಅವುಗಳ ರಕ್ಷಣೆ ಪ್ರೋತ್ಸಾಹಕ್ಕಾಗಿ ಸಾಂಸ್ಕøತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಸಿದ್ಧಲಿಂಗ ಮನಹಳ್ಳಿ, ಜೈಮಾತಾ ಯುವಕ ಸಂಘದ ಅಧ್ಯಕ್ಷ ಬಾಬು ಏಳಗಂಟಿ, ಶಿವಾನಂದ ಬಾಗೇವಾಡಿ, ಮುತ್ತು ದೇಶಪಾಂಡೆ? ಸಂಜು ಬಡಿಗೇರ, ವಿನಯ ಕುರ್ಲೆ, ಭೀಮಾಶಂಕರ ಬಡಿಗೇರ, ಎಸ್.ಬಿ. ಹಂಪಣ್ಣವರ, ಬಿ.ಎಸ್. ನರಗುಂದ, ಶಿವಲಿಂಗ ಕಾರಜೋಳ, ಮಹಾದೇವ ಪತ್ತಾರ, ಗೌರಮ್ಮ ಮನಹಳ್ಳಿ, ಜ್ಯೋತಿ ಸಂಗಮ, ಜಯಶ್ರೀ ಪಾಟೀಲ, ಪವಿತ್ರ ಕಂಕಣವಾಡಿ, ಸರೋಜನಿ ಬಿರಾದಾರ, ಪವಿತ್ರಾ ಬಿರಾದಾರ, ಎಂ.ಎಸ್.ಕಳ್ಳಿಮನಿ, ಸಂತೋಷ ಬಾಗೇವಾಡಿ, ವೀರೇಶ ವಾಂಗಿ ಉಪಸ್ಥಿತರಿದ್ದರು.
ಸÀತೀಶ ಬಿರಾದಾರ ಸ್ವಾಗತಿಸಿದರು. ಚಂದ್ರಶೇಖರ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬಿರಾದಾರ ವಂದಿಸಿದರು.