ಇಲಿಜ್ವರ ಹಿನ್ನೆಲೆ: ಯುವಕ ಮೃತ್ಯು 

ಸುಳ್ಯ, ಸೆ.೧೨- ಯುವಕನೊಬ್ಬ ಇಲಿಜ್ವರದ ಉಲ್ಬಣಗೊಂಡ ಪರಿಣಾಮ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. 

ಜಯನಗರ ನಿವಾಸಿ ಹಿರಿಯ ಆಟೋ ಚಾಲಕ ರಿಚರ್ಡ್ ಕ್ರಾಸ್ತಾ ಎಂಬವರ ಪುತ್ರ ಆಕರ್ಷ್ ಕ್ರಾಸ್ತ (35) ಮೃತಪಟ್ಟವರು. ಕ್ರಾಸ್ತ ಅವರಿಗೆ ಕೆಲವು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅವರಿಗೆ ಇಲಿಜ್ವರ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿದುಬಂದಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.