ಇಲಿಜ್ವರ ತಡೆ ನಿಯಂತ್ರಣ: ಬೀದಿ ನಾಟಕ

ಗದಗ,ಫೆ7: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸಮೀಕ್ಷಣಾ ಘಟಕ ವತಿಯಿಂದ ನಗರದ ಪಂಡಿತ ಪುಟ್ಟರಾಜ ಬಸ್‍ನಿಲ್ದಾಣ ಶನಿವಾರದಂದು ಇಲಿಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ಅಡವಿಸೋಮಾಪುರದ ಸಿದ್ಧಲಿಂಗೇಶ್ವರ ಜಾನಪದ ಕಲಾ ತಂಡ ಇವರ ನೇತೃತ್ವದಲ್ಲಿ ಬೀದಿ ನಾಟಕ/ಜಾನಪದ ಸಂಗೀತದ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ ಇಲಿಜ್ವರ ಒಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದಕ್ಕೆ ಯಾರೂ ಭಯ ಪಡುವ ಅಗತ್ಯವಿಲ್ಲ. ಇದಕ್ಕೆ ನಿಖರವಾದ ಚಿಕಿತ್ಸೆ ಇದ್ದು, ಲಕ್ಷಣಗಳು ಕಂಡ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಸಿದ್ಧಲಿಂಗೇಶ್ವರ ಕಲಾತಂಡ ವೀರಣ್ಣ ಮತ್ತು ಸಂಗಡಿಗರಿಂದ ಬೀದಿ ನಾಟಕ/ಸಂಗೀತದ ಮೂಲಕ ಜನರಿಗೆ ಇಲಿಜ್ವರ ಹರಡುವ ಬಗ್ಗೆ, ಲಕ್ಷಣಗಳು ಹಾಗೂ ನಿಯಂತ್ರಣಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಡೆಮಿಯೋಲಾಜಿಸ್ಟ್ ಡಾ.ಪ್ರವೀಣ ನಿಡಗುಂದಿ, ಮೈಕ್ರೋಬಯೋಲಾಜಿಸ್ಟ್ ಆದ ಪ್ರತೀಕ್ ಹುರಕಡ್ಲಿ, ರಮೇಶ ಅರಹುಣಸಿ, ಎಮ್.ಎಸ್.ರಬ್ಬನಗೌಡ್ರ, ವಿರೇಶ ಮದಕಟ್ಟಿ ಹಾಗೂ ಜಿಲ್ಲಾ ಸಮೀಕ್ಷಣಾ ಘಟಕದ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.