ಇಲಾಖೆಗಳಲ್ಲಿ ತ್ವರಿತವಾಗಿ ಕೆಲಸ ನಿರ್ವಹಿಸಿ: ಹೆಬ್ಬಾರ

??????

ಮುಂಡಗೋಡ,ಏ17: ಮಳೆಗಾಲ ಆರಂಭವಾಗುತ್ತಿದ್ದು ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಮುಂಜಾಗೃತಿ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮೈನಳ್ಳ್ಳಿ ಗ್ರಾ.ಪಂ. ಸಭಾಭವನದಲ್ಲಿ ತಾಲೂಕಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ತಮ್ಮ ತಮ್ಮ ಇಲಾಖೆಗಳಲ್ಲಿ ತ್ವರಿತವಾಗಿ ಕೆÀಲಸ ಮಾಡಬೇಕು. ತಮ್ಮ ಇಲಾಖೆಗಳಲ್ಲಿ ಅಭಿವೃದಿಯ ಬಗ್ಗೆ ಹಾಗೂ ಇನ್ನಿತರ ಏನಾದರೂ ಕೆಲಸ ಆಗಬೇಕಿದ್ದಲ್ಲಿ ನನ್ನ ಗಮನಕ್ಕೆ ತರುವಂತೆ ಸೂಚಿಸಿದರು. ಬರುವ ದಿನಗಳಲ್ಲಿ ರೈತರಿಗೆ ಗೊಬ್ಬರ, ಬೀಜ ಹಾಗೂ ಕೃಷಿಗೆ ಬೇಕಾಗುವ ವಸ್ತುಗಳು ಕಡಿಮೆ ಆಗದಂತೆ ದಾಸ್ತುನು ಮಾಡಿಕೊಂಡು ಇರುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ನೀರಾವರಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು ಅಭಿವೃದ್ಧಿಗೆ ಹಿನ್ನಡೆ ಆಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಸಂದÀರ್ಭದಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ ಮಾತನಾಡಿ, ಈಗಾಗಲÉೀ ಕೇಂದ್ರದ ಸಿಬಿಎಸ್ ಪರೀಕ್ಷೆಗಳು ರದ್ದು ಆಗಿವೆ. ಇದೇ ರೀತಿ ರಾಜ್ಯದ ಹಾಗೂ ತಾಲೂಕಿನ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ನಡೆಯುತ್ತವೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ ಎಂದು ಸಚಿವರ ಗಮನಕ್ಕೆ ತಂದಾಗ, ಶಿಕ್ಷಣ ಸಚಿವರು ಇನ್ನು ಯಾವ ನಿರ್ಧಾರ ಕೈಗೊಂಡಿಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ. ಆದರೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದರು. ನಂತರ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಜಿ.ಪಂ ಸದಸ್ಯ ಎಲ್.ಟಿ. ಪಾಟೀಲ್, ಮೈನಳ್ಳಿ ಗ್ರಾ.ಪಂ ಅಧ್ಯೆಕ್ಷೆ ಸೀತಾ ಎಡಗೆ, ವಿವಿಧ ಇಲಾಖೆ ಅಧಿಕಾರಿಗಳು ಮುಂಖಡರಾದ ಸಿ.ಕೆ ಅಶೋಕ, ದೇವು ಪಾಟೀಲ, ರಮೇಶ ರಾಯ್ಕರ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.