ಇರುವುದೊಂದೇ ಭೂಮಿ ಉಳಿಸಿಕೊಳ್ಳಬೇಕಿದೆ ಸ್ವಾಮಿ

(ಇಂದು ವಿಶ್ವ ಭೂ ದಿನ)
ಭೂಮಿಯನ್ನು ನಾವು ತಾಯಿ ಎಂದು ಕರೆಯುತ್ತೇವೆ.ಏಕೆಂದರೆ ಸೌರಮಂಡಲದ ಐದನೇ ದೊಡ್ಡ ಅತ್ಯಂತ ದೊಡ್ಡ ಗ್ರಹ ಭೂಮಿ.ಆನಂತ ಕೋಟಿ ಜೀವ ಸಂಕುಲ ಆಶ್ರಯ ನೀಡಿ ಬದುಕುಲು ಎಲ್ಲಾ ಸೌಲಭ್ಯಗಳನ್ನು ಒದಗಿಸಿರುವ ವಿಶೇಷತೆ ವೈವಿಧ್ಯತೆಯಿಂದ ಕೂಡಿದ ಗ್ರಹವಾಗಿದೆ.ಆದಕ್ಕಾಗಿ ನಾವು ಭೂಮಿಯನ್ನು ತಾಯಿ ಎಂದು ಕರೆಯಲಾಗುತ್ತದೆ.
ಜೀವಿಗಳು ವಾಸಿಸಲು ಯೋಗ್ಯವಾದ, ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಜೀವ ಸಂಕುಲಕ್ಕೆ ಕಲ್ಪಿಸಿಕೊಟ್ಟಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಭೂಮಿಯು ಕಲುಷಿತಗೊಂಡು ಅನೇಕ ಜೀವರಾಶಿಗಳ ಜೀವಕ್ಕೆ ಆಪತ್ತು ಬಂದಿದೆ.ಪರಿಸರ ಮಾಲಿನ್ಯ ಉಂಟಾಗಿ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯ ಒಡೆತನ ನಾಶವಾಗುತ್ತಿದೆ.ಹೀಗೆ ಆದರೆ ಮುಂದೆ ಜೀವರಾಶಿ ಉಳಿಯಲು ಸಾಧ್ಯವಿಲ್ಲ.ಆದ್ದರಿಂದ ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಪ್ರಿಲ್ ೨೨ ರಂದು ವಿಶ್ವ ಭೂ ದಿನ ಎಂದು ಆಚರಿಸಲಾಗುತ್ತದೆ.
ಮೊದಲಿಗೆ ೧೯೭೦ ಏಪ್ರಿಲ್ ೨೨ ರಂದು ವಿಶ್ವ ಭೂ ದಿನ ಆಚರಣೆ ಮಾಡಲಾಯಿತು. ವಿಶ್ವ ಭೂ ದಿನವನ್ನು ೧೯೩ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ೧೯೭೦ ಅಮೇರಿಕಾದಲ್ಲಿ ಪರಿಸರ ಪ್ರೇಮಿಗಳು ಪರಿಸರ ಮಾಲಿನ್ಯ ತಡೆಯಲು ಚಳುವಳಿ ಮಾಡಿ ಸರ್ಕಾರ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಹೋರಾಟ ಮಾಡಿದರು. ಈ ಹೋರಾಟ ಫಲವಾಗಿ ಸರ್ಕಾರ ಪರಿಸರ ಸಂರಕ್ಷಣೆ ಅನೇಕ ಕಾಯಿದೆಗಳನ್ನು ರೂಪಿಸಿತು.ಇದರ ಪ್ರಯುಕ್ತ ಪರಿಸರ ಉಳಿವಿಗಾಗಿ ಹಾಗೂ ಜನರಲ್ಲಿ ಜಾಗೃತಿಗಾಗಿ ಎಪ್ರಿಲ್ ೨೨ ವಿಶ್ವ ಭೂ ದಿನ ಆಚರಣೆ ಮಾಡಲಾಗುತ್ತದೆ.
ಜೀವಿಗಳ ವಾಸಿಸುವ ಏಕೈಕ ಆಧಾರ ಭೂಮಿಯಾಗಿದೆ.ಮಾನವ ದುರಾಸೆಯಿಂದ ಪರಿಸರ ಹಾಳಾಗುತ್ತದೆ.ಗಿಡ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಸಾಯನಿಕ ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗುತ್ತದೆ.ಜಾಗತಿಕ ತಾಪಮಾನ ಹೆಚ್ಚಳ ಪರಿಸರದ ಮೇಲೆ ಘೋರ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಜೀವ ಸಂಕುಲ ಮೇಲೆ ಅಗಾಧವಾದ ಪರಿಣಾಮ ಉಂಟಾಗುತ್ತದೆ.
ಇರುವುದೊಂದೇ ಭೂಮಿ ಉಳಿಸಿಕೊಳ್ಳಬೇಕಿದೆ ಸ್ವಾಮಿ.ಗಿಡಮರಗಳನ್ನು ಬೆಳಿಸಿ, ಪರಿಸರ ಸ್ನೇಹಿಯಾಗಿ ನಮ್ಮ ಬದುಕು ಕಟ್ಟಿಕೊಂಡು ಇತರ ಜೀವರಾಶಿ ಬದುಕುಲು ಅವಕಾಶ ಕಲ್ಪಿಸಬೇಕಿದೆ .ಈ ಮೂಲಕ ಪ್ರತಿಯೊಬ್ಬರೂ ಪರಿಸರ , ಭೂಮಿಯನ್ನು ಉಳಿಸಲು ಸಂಕಲ್ಪ ಮಾಡಬೇಕಾಗಿದೆ. ಈ ೨೦೨೧ರ ವರ್ಷದ ಥೀಮ್ ” ಭೂಮಿಯನ್ನು ಮರುಸ್ಥಾಪಿಸಿ”ವಿಶ್ವ ಭೂ ದಿನದ ಥೀಮ್ ಆಗಿದೆ.
ಗೋಪಾಲ ನಾಯಕ ಜೂಕೂರು
ಯುವ ಬರಹಗಾರರು