ಇರುವುದು ಒಂದೇ ಭೂಮಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು

ಕಲಬುರಗಿ,ಜು.22:ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಪ್ರಾದೇಶಿಕ ವಲಯ ,ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜೂನ್ 5 2022ರ ವಿಶ್ವ ಪರಿಸರ ದಿನಾಚರಣೆಯ ಘೋಷ ವಾಕ್ಯವಾದ “ಇರುವುದು ಒಂದೇ ಭೂಮಿ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು” ಅರ್ಥಪೂರ್ಣವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಸುನಿಲ್ ಕುಮಾರ್ ಚವ್ಹಾಣ ಮಾನವನಿಗೆ ವಾಸ ಮಾಡಲಿಕ್ಕೆ ಒಂದೇ ಭೂಮಿ ಇದ್ದು ನಮ್ಮ ತಾಯಿಯಂತೆ ಭೂಮಿಯನ್ನು ಕಂಡು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದೆ ಬರಬೇಕು. ಪರಿಸರದಲ್ಲಿ ಅಸಂಖ್ಯಾತ ವನ್ಯ ಸಂಪತ್ತು ಮತ್ತು ಜೀವ ಸಂಕುಲನ ಇದ್ದು ಪ್ರಕೃತಿಯಲ್ಲಿ ಸ್ಥಿರತೆ ಕಾಣಬೇಕಾದರೆ ಎಲ್ಲವೂ ಇದ್ದಾಗ ಮಾತ್ರ ಸಾಧ್ಯ ಮನುಷ್ಯ ತನ್ನ ಸ್ವಾರ್ಥದಿಂದ ಪರಿಸರವನ್ನು ಹಾಳು ಮಾಡಿ ತನ್ನ ಕಾಲ ಮೇಲೆ ತಾನು ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾನೆ. ಈ ಸಂಸ್ಕೃತಿ ತೊಲಗಬೇಕು ಪ್ರತಿಯೊಬ್ಬರೂ ಗಿಡ ಗಂಟೆಗಳನ್ನು ನಡೆಸಿ ಸಂರಕ್ಷಿಸಿ, ಪರಿಸರವನ್ನು ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಅರಣ್ಯ ಇಲಾಖೆಯಿಂದ ಸಾಕಷ್ಟು ವನ್ಯ ಸಂಪತ್ತು ಹೆಚ್ಚಿಸಲು ಯೋಜನೆಗಳಿದ್ದು ಇದರ ಲಾಭ ಪಡೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಚಂದ್ರಶೇಖರ್ ದೊಡ್ಮನಿ ಎನ್ಎಸ್ಎಸ್ ವಿಭಾಗಿಯ ಅಧಿಕಾರಿಗಳು ಕಲಬುರ್ಗಿ ಪರಿಸರವು ಮಾನವನಿಗೆ ಅಪಾರ ಪ್ರಮಾಣದಲ್ಲಿ ಗಿಡಮೂಲಿಕೆಗಳನ್ನು ನೀಡಿದ್ದು ಪ್ರತಿಯೊಂದು ಗಿಡಮೂಲಿಕೆ ತನ್ನದೇ ಆದ ಮಹತ್ವ ಇದೆ ಅವು ಮಾನವನಿಗೆ ಉಪಯುಕ್ತಕಾರಿಯಾಗಿದ್ದು ಈ ನಿಟ್ಟಿನಲ್ಲಿ ಆಯುರ್ವೇದದ ಮಹತ್ವ ಸಾರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಮತಿ ಸುಜಾತಾ ಬಿರಾದರ್ ಕಾಲೇಜಿನಲ್ಲಿ ಸಸಿಗಳನ್ನು ನೆಟ್ಟಿ ವಿದ್ಯಾರ್ಥಿಗಳಲ್ಲಿ ಹಾಗೂ ಸ್ವಯಂಸೇವಕರಲ್ಲಿ ಪರಿಸರದ ಜಾಗೃತಿ ಅರಿವು ಮೂಡಿಸಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಪರಿಸರದ ಸಂರಕ್ಷರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪಾಂಡು ಎಲ್ ರಾಠೋಡ್ ಮಾತನಾಡಿದರು. ವಲಯ ಅರಣ್ಯ ಅಧಿಕಾರಿಯಾದ ಸಚಿನ್ ಪಾಟೀಲ್ ರವರು ಮಾತನಾಡಿ ಗಿಡಗಳು ಪೋಷಣೆ ಯಾವ ರೀತಿ ಮಾಡಬೇಕು ವಿದ್ಯಾರ್ಥಿಗಳಿಗೆ ತಿಳಿಸಿದರು .
ಕಾಲೇಜಿನ ಅವರಣದಲ್ಲಿ ಸಸಿಗಳನ್ನು ನಡೆಸಲಾಯಿತು ಹಾಗೂ ಪರಿಸರ ಜಾಗೃತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಮಾಪಣ್ಣ ಜೀರೋಳ್ಳಿ ನಿರ್ವಹಿಸಿದ್ದರು .ಸಿದ್ದಲಿಂಗಪ್ಪ ಪೂಜಾರಿ ಸ್ವಾಗತಿಸಿದರು.
ಶ್ರೀ ಬಲರಾಮ್ ಚೌಹಾಣ್ ವಂದಿಸಿದರು ಕಾರ್ಯಕ್ರಮವನ್ನು ಎನ್ಎಸ್ಎಸ್ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಲ್ಲಯ್ಯ ಮಠಪತಿ, ಶ್ರೀಮತಿ ರೇಖಾ ರಾಯಿಚುರಕರ್ , ಸ್ವಯಂಸೇವಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.