ಇರುಳುಗಣ್ಣುವಿಗೆ ಮನೆ ಮದ್ದು

೧. ಕೃಷ್ಣತುಳಸಿ (ಕಪ್ಪುತುಳಸಿ) ೧ ಹಿಡಿಯಷ್ಟು ತೆಗೆದುಕೊಂಡು ಚೆನ್ನಾಗಿ ತೊಳೆದು ರಸ ತೆಗೆದು ರಸವನ್ನು ಎರಡು ಕಣ್ಣಿಗೆ ೨ -೨ ಹನಿ ಹಾಕುತ್ತಾ ಬಂದರೆ ಇರುಳುಗಣ್ಣು ಹಾಗೂ ಮಂದದೃಷ್ಟಿ ಇರುವುದು ಎರಡೂ ನಿವಾರಣೆಯಾಗುತ್ತದೆ.
೨. ನಿಂಬೆಹಣ್ಣಿನ ರಸಕ್ಕೆ ಜೇನುತುಪ್ಪ ಹಾಗೂ ಚಿಟಿಕೆ ಪಚ್ಚಕರ್ಪೂರವನ್ನು ಕಲಸಿ ಕಣ್ಣಿಗೆ ಕಾಡಿಗೆಯಂತೆ ಇಡುತ್ತಾ ಬಂದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ, ಕಣ್ಣಿನಲ್ಲಿ ಕಾಂತಿ ಹೆಚ್ಚಾಗುತ್ತದೆ.
೩. ಏಲಕ್ಕಿಯಿಂದ ತೆಗೆದ ಎಣ್ಣೆಯನ್ನು ಕಣ್ಣುಗಳಿಗೆ ೨ – ೨ ಹನಿ ಹಾಕುತ್ತಾ ಬಂದರೆ ಇರುಳುಗಣ್ಣು ನಿವಾರಣೆಯಾಗುತ್ತದೆ.
೪. ಅಗಸೆ ಬೀಜದ ಹೂವನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಕೆಲವು ದಿನಗಳವರೆಗೆ ಸೇವಿಸುವುದರಿಂದ ಇರುಳುಗಣ್ಣು ಉತ್ತಮಗೊಳ್ಳುತ್ತದೆ.
೫. ಕುಂಬಳಗಿಡದ ಬೀಜವನ್ನು ಸುಟ್ಟು ಭಸ್ಮ ಮಾಡಿ ಬೆಣ್ಣೆಗೆ ಈ ಭಸ್ಮವನ್ನು ಸೇರಿಸಿ ಕಲಸಿ ಕಣ್ಣಿಗೆ ಕಾಡಿಗೆಯಂತೆ ಹಚ್ಚುವುದು.
೬. ಹಾಗಲಕಾಯಿಎಲೆ ರಸಕ್ಕೆ ಶುದ್ಧ ಜೇನುತುಪ್ಪ ೨ ಹನಿ ಸೇರಿಸಿ ಕಣ್ಣಿಗೆ ಹಚ್ಚುತ್ತಾ ಬಂದರೆ ಕ್ರಮೇಣ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.
೭. ನುಗ್ಗೆಬೀಜದ ಚೂರ್ಣವನ್ನು ಹಸುವಿನ ತುಪ್ಪದಲ್ಲಿ ಬೆರೆಸಿ ಕಣ್ಣಿಗೆ ಸೌಮ್ಯವಾಗಿ ಹಚ್ಚಿಕೊಳ್ಳುವುದು.
೮. ಕುಂಬಳಕಾಯಿಯ ಬೀಜವನ್ನು ಸುಟ್ಟು ಭಸ್ಮ ಮಾಡಿ ಅದರ ನುಣುಪಾದ ಪುಡಿಯನ್ನು ಬೆಣ್ಣೆಯಲ್ಲಿ ಕಲಸಿ ಅಂಜನ ಹಾಕುವುದು.
೯. ಅಗಸೆ ಗಿಡದ ಹೂವಿನ ಕಷಾಯವನ್ನು ತಯಾರಿಸಿ ಕೆಲವು ದಿನಗಳವರೆಗೆ ಸೇವಿಸುವುದರಿಂದ ದೃಷ್ಟಿದೋಷ ನಿವಾರಣೆಯಾಗುವುದು.
೧೦. ಅಮೃತಬಳ್ಳಿಯ ರಸ ತೆಗೆದು ಅದಕ್ಕೆ ಸೈಂಧವ ಲವಣದ ಚೂರ್ಣ ಹಾಗೂ ಶುದ್ಧ ಜೇನುತುಪ್ಪ ಸೇರಿಸಿ ಅರೆದು ಕಣ್ಣುಗಳಿಗೆ ಹಾಕುವುದರಿಂದ ಯಾವುದೇ ವಿಧವಾದ ನೇತ್ರ ದೋಷವಿದ್ದರೂ ಗುಣವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.